×
Ad

ಪ್ಯಾರಾ ಶೂಟಿಂಗ್ ವಿಶ್ವಕಪ್: ಅವನಿ ಲೇಖರಗೆ ಮತ್ತೊಂದು ಚಿನ್ನ

Update: 2022-06-11 21:02 IST

ಪ್ಯಾರಿಸ್, ಜೂ.11: ಭಾರತದ ಪ್ಯಾರಾ ಶೂಟರ್ ಅವನಿ ಲೇಖರ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ ಶನಿವಾರ ಮತ್ತೊಂದು ಚಿನ್ನದ ಪದಕ ಜಯಿಸಿದರು. ಟೋಕಿಯೊ ಒಲಿಂಪಿಯನ್ ಆರ್8 ಸ್ಪರ್ಧೆಯ ಮಹಿಳೆಯರ 50 ಮೀ.ರೈಫಲ್ 3 ಪೊಸಿಶನ್ಸ್ ಎಸ್‌ಎಚ್1 ಫೈನಲ್‌ನಲ್ಲಿ 458.3 ಅಂಕ ಗಳಿಸಿದರು. ಪ್ರತಿಸ್ಪರ್ಧಿ ಸ್ಲೋವಾಕಿಯದ ಹಿರಿಯ ಶೂಟರ್ ವೆರೊನಿಕಾ ವಡೊವಿಕೊವಾರನ್ನು ಸೋಲಿಸಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟರು.

ಅವನಿ ಮಂಗಳವಾರ ಮಹಿಳೆಯರ 10 ಮೀ.ಏರ್ ರೈಫಲ್ ಸ್ಟಾಂಡಿಂಗ್ ಎಸ್‌ಎಚ್ 1ರಲ್ಲಿ 250.6 ಅಂಕ ಗಳಿಸಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದರು. ಕಳೆದ ವರ್ಷ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಮಹಿಳೆ ಎನಿಸಿಕೊಳ್ಳುವ ಮೂಲಕ ಶೂಟರ್ ಅವನಿ ಇತಿಹಾಸ ರಚಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News