2023-2027 ರ ಸಾಲಿನ ಐಪಿಎಲ್ ಮಾಧ್ಯಮ ಹಕ್ಕುಗಳು 43,050 ಕೋಟಿ ರೂ.ಗೆ ಮಾರಾಟ: ವರದಿ

Update: 2022-06-13 07:59 GMT

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ 2023 ರಿಂದ 2027 ರವರೆಗಿನ ಮುಂದಿನ ಐದು ವರ್ಷಗಳ ಅವಧಿಗೆ ಮಾಧ್ಯಮ ಹಕ್ಕುಗಳನ್ನು ಪಡೆಯಲು  ದೇಶದ ಕೆಲವು ಪ್ರಮುಖ ಕ್ರೀಡಾ ಪ್ರಸಾರ ಸಂಸ್ಥೆಗಳ ನಡುವೆ ತೀವ್ರ ಸ್ಪರ್ದೆ ಕಂಡುಬಂದಿವೆ. ಮೂಲಗಳ ಪ್ರಕಾರ, ಟಿವಿ ಹಾಗೂ  ಡಿಜಿಟಲ್ ಒಳಗೊಂಡಿರುವ ಹಕ್ಕುಗಳ ಪ್ಯಾಕೇಜ್ ಎ ಮತ್ತು ಬಿ 43,050 ಕೋಟಿ ರೂ.ಗೆ ಮಾರಾಟವಾಗಿದೆ.

ಮಾಧ್ಯಮ ಹಕ್ಕುಗಳ ಪ್ಯಾಕೇಜ್ ಎ ಮತ್ತು ಪ್ಯಾಕೇಜ್ ಬಿ ಅನ್ನು ಎರಡು ಕಂಪನಿಗಳು ಗೆದ್ದಿರುವುದರಿಂದ ಇದಕ್ಕೆ  ಹೆಚ್ಚಿನ ತಿರುವುಗಳಿರಬಹುದು. ಇತ್ತೀಚಿನ ಮಾಹಿತಿಯ ಪ್ರಕಾರ, ಪ್ಯಾಕೇಜ್ ಎ ವಿಜೇತರು ಸಂಪೂರ್ಣ ಟಿವಿ ಹಾಗೂ  ಡಿಜಿಟಲ್ ಹಕ್ಕುಗಳ ಸಂಯೋಜನೆಯನ್ನು ಪಡೆಯುವ ದೃಷ್ಟಿಯಿಂದ ಪ್ಯಾಕೇಜ್ ಬಿ ವಿಜೇತರಿಗೆ ಸವಾಲು ಹಾಕಲಿದ್ದಾರೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ 2017 ರಲ್ಲಿ 16,347.50 ಕೋಟಿ ರೂ.ಗಳ ಬಿಡ್‌ನೊಂದಿಗೆ 2017-2022 ರ ಅವಧಿಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಧ್ಯಮ ಹಕ್ಕುಗಳನ್ನು ಪಡೆಯಲು ಸ್ಟಾರ್ ಇಂಡಿಯಾವು  ಸೋನಿ ಪಿಕ್ಚರ್ಸ್ ಅನ್ನು ಹೊರದಬ್ಬಿತು.

2008 ರಲ್ಲಿ  ಸೋನಿ ಪಿಕ್ಚರ್ಸ್ ನೆಟ್‌ವರ್ಕ್ 10 ವರ್ಷಗಳ ಅವಧಿಗೆ ಐಪಿಎಲ್ ಮಾಧ್ಯಮ ಹಕ್ಕುಗಳನ್ನು   8,200 ಕೋಟಿ ರೂ.ಬಿಡ್‌ನೊಂದಿಗೆ ಗೆದ್ದುಕೊಂಡಿತ್ತು. ಮೂರು ವರ್ಷಗಳ ಅವಧಿಗೆ ಐಪಿಎಲ್‌ನ ಜಾಗತಿಕ ಡಿಜಿಟಲ್ ಹಕ್ಕುಗಳನ್ನು ನೋವಿ ಡಿಜಿಟಲ್‌ಗೆ 2015 ರಲ್ಲಿ 302.2 ಕೋಟಿ ರೂ.ಗೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News