ಅವೇಶ್ ಖಾನ್ ಅಮೋಘ ಬೌಲಿಂಗ್‌ಗೆ ದಕ್ಷಿಣ ಆಫ್ರಿಕಾ ದಿಕ್ಕಾಪಾಲು

Update: 2022-06-17 17:40 GMT
Photo : twitter.com/BCCI

ರಾಜ್‌ಕೋಟ್, ಜೂ. 17: ವೇಗದ ಬೌಲರ್ ಅವೇಶ್ ಖಾನ್ ಅಮೋಘ ಬೌಲಿಂಗ್(4-18) , ಮಧ್ಯಮ ಕ್ರಮಾಂಕದ ಬ್ಯಾಟರ್ ದಿನೇಶ್ ಕಾರ್ತಿಕ್ ಜೀವನಶ್ರೇಷ್ಠ ಇನಿಂಗ್ಸ್(55 ರನ್, 27 ಎಸೆತ, 9 ಬೌಂಡರಿ, 2 ಸಿಕ್ಸರ್)ಹಾಗೂ ಹಾರ್ದಿಕ್ ಪಾಂಡ್ಯ(46 ರನ್, 31 ಎಸೆತ, 3 ಬೌಂಡರಿ, 3 ಸಿಕ್ಸರ್)ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡ ವಿರುದ್ಧದ 4ನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 82 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದೆ.

ಶುಕ್ರವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ದ.ಆಫ್ರಿಕಾ 16.5 ಓವರ್‌ಗಳಲ್ಲಿ 87 ರನ್‌ಗೆ ಆಲೌಟಾಗಿದೆ. ಆಫ್ರಿಕಾವು ಟ್ವೆಂಟಿ-20ಯಲ್ಲಿ ಅತ್ಯಂತ ಕನಿಷ್ಠ ಸ್ಕೋರ್ ಗಳಿಸಿದೆ.

ರಸಿ ವಾನ್‌ಡರ್ ಡುಸೆನ್(20 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ಅವೇಶ್ ಖಾನ್‌ಗೆ ಸ್ಪಿನ್ನರ್ ಯಜುವೇಂದ್ರ ಚಹಾಲ್(2-21) ಉತ್ತಮ ಸಾಥ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News