ಟೆಕ್ಸಾಸ್‌: ಟ್ರಕ್‌ನೊಳಗೆ 46 ವಲಸಿಗರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2022-06-28 04:43 GMT
Photo:AP

ನ್ಯೂಯಾರ್ಕ್ : ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಲ್ಲಿ ಸೋಮವಾರ ಟ್ರಾಕ್ಟರ್-ಟ್ರೇಲರ್‌ನೊಳಗೆ 46 ವಲಸಿಗರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದನ್ನು ಅಧಿಕಾರಿಗಳು ಗುರುತಿಸಿದ್ದಾರೆ ಎಂದು ನಗರದ ಅಗ್ನಿಶಾಮಕ ಇಲಾಖೆ ತಿಳಿಸಿದೆ.

  ಇದು ಇತ್ತೀಚೆಗಿನ ವರ್ಷಗಳಲ್ಲಿ ಅಮೆರಿಕ -ಮೆಕ್ಸಿಕೋ ಗಡಿಯಲ್ಲಿ  ಸಂಭವಿಸಿರುವ ಅತ್ಯಂತ ಭೀಕರ ಮಾನವ ಕಳ್ಳಸಾಗಣೆ ಘಟನೆ  ಎಂಬಂತೆ ಕಂಡುಬಂದಿದೆ.

ನಾಲ್ವರು ಅಪ್ರಾಪ್ತರು ಸೇರಿದಂತೆ ಟ್ರೇಲರ್‌ನಲ್ಲಿ ಕಂಡುಬಂದ ಇತರ 16 ಜನರನ್ನು ಉಷ್ಣತೆಯಿಂದ ಉಂಟಾಗುವ ಸಮಸ್ಯೆಗಾಗಿ  ಹಾಗೂ  ಬಳಲಿಕೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸ್ಯಾನ್ ಆಂಟೋನಿಯೊ ಅಗ್ನಿಶಾಮಕ ಇಲಾಖೆಯು ತಿಳಿಸಿದೆ. ಘಟನೆಯ ನಂತರ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ದಕ್ಷಿಣ ಹೊರವಲಯದಲ್ಲಿರುವ ಪ್ರದೇಶದಲ್ಲಿ ರೈಲು ಹಳಿಗಳ ಪಕ್ಕದಲ್ಲಿ ಟ್ರಕ್ ಪತ್ತೆಯಾಗಿದೆ.

 ಟ್ರಕ್‌ನಲ್ಲಿ ವಲಸಿಗರು  ಉಸಿರುಗಟ್ಟಿ ಸಾವನ್ನಪ್ಪಿದ್ದನ್ನು   "ಟೆಕ್ಸಾಸ್‌ನಲ್ಲಿನ ದುರಂತ" ಎಂದು ಮೆಕ್ಸಿಕೊದ ವಿದೇಶಾಂಗ ಸಚಿವ ಮಾರ್ಸೆಲೊ ಎಬ್ರಾಡ್  ಕರೆದಿದ್ದಾರೆ.

ಸ್ಥಳೀಯ ದೂತಾವಾಸವು ಘಟನಾ ಸ್ಥಳಕ್ಕೆ ಹೋಗುತ್ತಿದೆ . ಆದಾಗ್ಯೂ ಮೃತಪಟ್ಟವರ ರಾಷ್ಟ್ರೀಯತೆ ದೃಢೀಕರಿಸಲಾಗಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News