ಬೈಡೆನ್ ಪತ್ನಿ, ಪುತ್ರಿಗೆ ರಶ್ಯ ಪ್ರವೇಶಕ್ಕೆ ನಿಷೇಧ: ಅಂತಾರಾಷ್ಟ್ರೀಯ ನಿರ್ಬಂಧದ ವಿರುದ್ಧ ಮಾಸ್ಕೋದ ‘ಪ್ರತೀಕಾರ’

Update: 2022-06-28 16:43 GMT

ಮಾಸ್ಕೊ,ಜೂ.28: ತನ್ನ ವಿರುದ್ಧದ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ರಶ್ಯವು ತನ್ನ ದೇಶಕ್ಕೆ, ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ಪತ್ನಿ ಹಾಗೂ ಪುತ್ರಿಗೆ ಪ್ರವೇಶವನ್ನು ನಿಷೇಧಿಸಿದೆ. ರಶ್ಯಕ್ಕೆ ಪ್ರವೇಶವನ್ನು ನಿಷೇಧಿಸಲ್ಪಟ್ಟ 25 ಮಂದಿ ಅಮೆರಿಕನ್ನರ ಪಟ್ಟಿಯಲ್ಲಿ ಬೈಡೆನ್ ಪತ್ನಿ ಜಿಲ್ ಹಾಗೂ ಪತ್ನಿ ಆ್ಯಶ್ಲಿ ಕೂಡಾ ಸೇರಿದ್ದಾರೆಂದು ರಶ್ಯನ್ ವಿದೇಶಾಂಗ ಇಲಾಖೆ ತಿಳಿಸಿದೆ.

   ರಿಪಬ್ಲಿಕನ್ ಪಕ್ಷದ ಸೆನೆಟರ್ಗಳಾದ ಮಿಕ್ ಮ್ಯಾಕೊನೆಲ್, ಸುಸಾನ್ ಕಾಲಿನ್ಸ್ ಹಾಗೂ ಬೆನ್ ಸ್ಯಾಸ್ಸೆ ಹಾಗೂ ಡೆಮೊಕ್ರಾಟ್ ಸೆನೆಟನ್ ಕಿರ್ಸ್ಟಿನ್ ಗಿಲ್ಲಿಬ್ರಾಂಡ್ , ಶಿಕ್ಷಣ ತಜ್ಞ ಹಾಗೂ ಭಾರೀ ಜನಮನ್ನಣೆ ಪಡೆದ ‘ದಿ ಎಂಡ್ ಆಫ್ ಹಿಸ್ಟರಿ ಆ್ಯಂಡ್ ದಿ ಲಾಸ್ಟ್ ಮ್ಯಾನ್’ ಕೃತಿಯ ಲೇಖಕ ಫ್ರಾನ್ಸಿಸ್ ಫುಕುಯಾಮಾ ರಶ್ಯ ಪ್ರವೇಶ ನಿಷೇಧಿಸಲ್ಪಟ್ಟಿರುವ ಅಮೆರಿಕನ್ನರ ಪಟ್ಟಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News