2ನೇ ಟ್ವೆಂಟಿ-20: ದೀಪಕ್ ಹೂಡಾ ಶತಕ, ಭಾರತ 225/7

Update: 2022-06-28 17:26 GMT
Photo:twitter

ಡಬ್ಲಿನ್, ಜೂ.28: ಅಗ್ರ ಸರದಿಯ ಬ್ಯಾಟರ್ ದೀಪಕ್ ಹೂಡಾ ಶತಕ(104 ರನ್, 57 ಎಸೆತ, 9 ಬೌಂಡರಿ, 6 ಸಿಕ್ಸರ್)ಹಾಗೂ ಸಂಜು ಸ್ಯಾಮ್ಸನ್ ಅರ್ಧಶತಕ(77 ರನ್, 42 ಎಸೆತ, 9 ಬೌಂಡರಿ, 4 ಸಿಕ್ಸರ್)ಕೊಡುಗೆಯ ನೆರವಿನಿಂದ ಭಾರತ ತಂಡ ಐರ್‌ಲ್ಯಾಂಡ್ ವಿರುದ್ಧ 2ನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಬ್ಯಾಟರ್ ಇಶಾನ್ ಕಿಶನ್(3 ರನ್)3ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಆಗ 2ನೇ ವಿಕೆಟ್‌ಗೆ 176 ರನ್ ಜೊತೆಯಾಟ ನಡೆಸಿದ ಹೂಡಾ ಹಾಗೂ ಸ್ಯಾಮ್ಸನ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.

ಸೂರ್ಯಕುಮಾರ್ ಯಾದವ್(15 ರನ್) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ(ಔಟಾಗದೆ 15 ರನ್)ಎರಡಂಕೆಯ ಸ್ಕೋರ್ ಗಳಿಸಿದರು.

ಐರ್‌ಲ್ಯಾಂಡ್ ಪರ ಮಾರ್ಕ್ ಅಡೈರ್(3-44), ಜೋಶ್ ಲಿಟ್ಲ್(2-38) ಹಾಗೂ ಕ್ರೆಗ್ ಯಂಗ್(2-35)7 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News