ಟ್ವೆಂಟಿ-20 ವಿಶ್ವಕಪ್ ತಂಡದಲ್ಲಿ ಮುಹಮ್ಮದ್ ಶಮಿಗೆ ಸ್ಥಾನವಿಲ್ಲ: ವರದಿ

Update: 2022-06-29 16:08 GMT
Photo:PTI

ಹೊಸದಿಲ್ಲಿ, ಜೂ.29: ಐರ್‌ಲ್ಯಾಂಡ್ ವಿರುದ್ಧದ 2 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಜಯಿಸಿರುವ ಟೀಮ್ ಇಂಡಿಯಾವು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. 2022ರ ಟ್ವೆಂಟಿ-20 ವಿಶ್ವಕಪ್‌ಗಿಂತ ಮೊದಲು ಇನ್ನು ಕೆಲವೇ ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಆಯ್ಕೆಗಾರರು ಪ್ರತಿಯೊಬ್ಬ ಆಟಗಾರನ ಪ್ರದರ್ಶನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಮೂಲಗಳ ಪ್ರಕಾರ ಮುಹಮ್ಮದ್ ಶಮಿ ಆಯ್ಕೆಗಾರರ ಪಟ್ಟಿಯಲ್ಲಿಲ್ಲ.

ಟ್ವೆಂಟಿ-20 ವಿಶ್ವಕಪ್‌ಗೆ ಶಮಿಯವರನ್ನು ಆಯ್ಕೆ ಮಾಡಲು ಆಯ್ಕೆಗಾರರು ಒಲವು ತೋರುತ್ತಿಲ್ಲ. ಅವರು ಈ ಮಾದರಿಯ ಕ್ರಿಕೆಟಿಗೆ ಫಿಟ್ ಆಗಿಲ್ಲ. ಆಯ್ಕೆಗಾರರು ಯುವ ಬೌಲರ್‌ಗಳತ್ತ ಒಲವು ತೋರಿದ್ದು, ಆಸ್ಟ್ರೇಲಿಯದಲ್ಲಿ ನಡೆಯಲಿರುವ ವಿಶ್ವಕಪ್‌ಗಿಂತ ಮೊದಲು ಯುವಕರಿಗೆ ಹೆಚ್ಚು ಅವಕಾಶ ನೀಡಲು ಬಯಸಿದ್ದಾರೆ. ಭುವನೇಶ್ವರ ಕುಮಾರ್ ಅವರನ್ನು ಓರ್ವ ಹಿರಿಯ ಬೌಲರ್ ಆಗಿ ಆಯ್ಕೆ ಮಾಡಬಹುದು. ಆದರೆ, ಈ ಬಾರಿ ಟ್ವೆಂಟಿ-20 ವಿಶ್ವಕಪ್‌ಗೆ ಶಮಿ ಹೊರಗುಳಿಯುವ ಸಾಧ್ಯತೆಯಿದೆ ಎಂದು ಮೂಲಗಳು ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದೆ.

ಶಮಿ ಜುಲೈ 1ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ದದ 5ನೇ ಟೆಸ್ಟ್ ಪಂದ್ಯಕ್ಕೆಲಭ್ಯವಿದ್ದಾರೆ.

ಗಮನಾರ್ಹ ವಿಚಾರವೆಂದರೆ 31ರ ಹರೆಯದ ಶಮಿ 2021ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧ ಕೊನೆಯ ಬಾರಿ ಟಿ-20 ಪಂದ್ಯವನ್ನು ಆಡಿದ್ದರು. ಆ ನಂತರ ಟಿ-20 ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News