ಲಗೇಜ್‌ನಲ್ಲಿ 109 ಜೀವಂತ ಪ್ರಾಣಿ ಬ್ಯಾಂಕಾಕ್ : ಭಾರತೀಯ ಮಹಿಳೆಯರ ಬಂಧನ

Update: 2022-06-29 18:01 GMT

 ಬ್ಯಾಂಕಾಕ್, ಜೂ.29: ತಮ್ಮ ಲಗೇಜ್‌ನಲ್ಲಿ 109 ಜೀವಂತ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ ಆರೋಪದಲ್ಲಿ ಇಬ್ಬರು ಭಾರತೀಯ ಮಹಿಳೆಯರನ್ನು ಥೈಲ್ಯಾಂಡ್ ಅಧಿಕಾರಿಗಳು ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ ಎಕ್ಸ್‌ರೇ ಪರಿಶೀಲನೆಯಲ್ಲಿ 2 ಸೂಟ್‌ಕೇಸ್‌ನ ಒಳಗಡೆ 2 ಬಿಳಿ ಮುಳ್ಳುಹಂದಿಗಳು, 2 ಚಿಪ್ಪುಹಂದಿಗಳು, 35 ಆಮೆಗಳು, 50 ಹಲ್ಲಿಗಳು ಮತ್ತು 20 ಹಾವುಗಳಿರುವುದು ಪತ್ತೆಯಾಗಿತ್ತು ಎಂದು ಥೈಲ್ಯಾಂಡ್‌ನ ವನ್ಯಜೀವಿ ಮತ್ತು ರಾಷ್ಟ್ರೀಯ ಉದ್ಯಾನ ಇಲಾಖೆಯ ಹೇಳಿಕೆ ತಿಳಿಸಿದೆ. ನಿತ್ಯಾ ರಾಜಾ ಮತ್ತು ಝಕಿಯಾ ಸುಲ್ತಾನಾ ಇಬ್ರಾಹಿಂ ಎಂಬ ಭಾರತೀಯ ಮಹಿಳೆಯರಿಗೆ ಸೇರಿದ ಸೂಟ್‌ಕೇಸ್ ಇದಾಗಿತ್ತು. ಇವರಿಬ್ಬರು ಚೆನ್ನೈಗೆ ಪ್ರಯಾಣಿಸುವ ವಿಮಾನಕ್ಕೆ ಕಾಯುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News