ದಕ್ಷಿಣ ಇರಾನ್‍ನಲ್ಲಿ ಪ್ರಬಲ ಭೂಕಂಪ; 3 ಸಾವು

Update: 2022-07-02 02:14 GMT
ಸಾಂದರ್ಭಿಕ ಚಿತ್ರ (PTI)

ಟೆಹರಾನ್: ದಕ್ಷಿಣ ಇರಾನ್‍ನಲ್ಲಿ ಶನಿವಾರ ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ರಷ್ಟಿತ್ತು ಎಂದು ಯೂರೋಪಿಯನ್ ಮೆಡಿಟರೇನಿಯನ್ ಭೂಕಂಪ ಮಾಪನ ಕೇಂದ್ರ (ಇಎಂಎಸ್‍ಸಿ) ಹೇಳಿದೆ. ಭೂಕಂಪದಿಂದ ವ್ಯಾಪಕ ಹಾನಿಯಾಗಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಆರಂಭಿಕ ವರದಿಗಳು ತಿಳಿಸಿವೆ.

ಕಂಪನ ಸುಮಾರು 10 ಕಿಲೋಮೀಟರ್ (6.21 ಮೈಲು) ಆಳದಲ್ಲಿ ಸಂಭವಿಸಿದೆ ಎಂದು ಇಎಂಎಸ್‍ಸಿ ಅಂದಾಜಿಸಿದೆ. ಇರಾನ್‍ನಲ್ಲಿ ಭೂಕಂಪ ಸಂಭವಿಸಿದ ಬಳಿಕ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲೂ ಕಂಪನದ ಅನುಭವವಾಗಿದೆ ಎಂದು ಸ್ಥಳೀಯರ ಹೇಳೀಕೆಯನ್ನು ಉಲ್ಲೇಖಿಸಿ ಖಲೀಜ್ ಟೈಮ್ಸ್ ವರದಿ ಮಾಡಿದೆ.

ದಕ್ಷಿಣ ಇರಾನ್‍ನಲ್ಲಿ ಮಧ್ಯರಾತ್ರಿ ಬಳಿಕ 1.32ರ ಸುಮಾರಿಗೆ ಭೂಕಂಪ ಸಂಭವಿಸಿತು ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ (ಎನ್‍ಸಿಎಂ) ಪ್ರಕಟಿಸಿದೆ.

6.3 ತೀವ್ರತೆಯ ಭೂಕಂಪ ಸೇರಿದಂತೆ ಎರಡು ಭೂಕಂಪಗಳು ಅನುಭವಕ್ಕೆ ಬಂದಿವೆ ಎಂದು ಗಲ್ಫ್‍ನ್ಯೂಸ್ ಹೇಳಿದೆ. ಎರಡನೇ ಭೂಕಂಪ ಮುಂಜಾನೆ 3.24ಕ್ಕೆ ಸಂಭವಿಸಿದೆ. ಈ ಎರಡು ಭೂಕಂಪಗಳ ನಡುವೆ 4.6 ಮತ್ತು 4.4 ತೀವ್ರತೆಯ ಕಂಪನಗಳು ಮುಂಜಾನೆ 2.43 ಮತ್ತು 3.13ಕ್ಕೆ ಅನುಭವಕ್ಕೆ ಬಂದಿವೆ ಎಂದು ತಿಳಿಸಿದೆ.
ಯುಎಇಯ ಎಲ್ಲ ಏಳು ದೇಶಗಳಲ್ಲೂ ಕಂಪನದ ಅನುಭವವಾಗಿದೆ ಎಂಧು ಸಾಮಾಜಿಕ ಜಾಲತಾಣ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News