ಐದನೇ ಟೆಸ್ಟ್: ಇಂಗ್ಲೆಂಡ್ ಗೆಲುವಿಗೆ 378 ರನ್ ಗುರಿ ನೀಡಿದ ಭಾರತ

Update: 2022-07-04 13:30 GMT
ಚೇತೇಶ್ವರ ಪೂಜಾರ, Photo:twitter

 ಬರ್ಮಿಂಗ್‌ಹ್ಯಾಮ್,ಜು.4: ಆರಂಭಿಕ ಬ್ಯಾಟರ್ ಚೇತೇಶ್ವರ ಪೂಜಾರ(66 ರನ್, 168 ಎಸೆತ,8 ಬೌಂಡರಿ)ಹಾಗೂ ರಿಷಭ್ ಪಂತ್(57 ರನ್, 86 ಎಸೆತ, 8 ಬೌಂಡರಿ)ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತವು ಆತಿಥೇಯ ಇಂಗ್ಲೆಂಡ್‌ಗೆ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಗೆಲುವಿಗೆ 378 ರನ್ ಗುರಿ ನೀಡಿದೆ.

ನಾಲ್ಕನೇ ದಿನವಾದ ಸೋಮವಾರ 3 ವಿಕೆಟ್ ನಷ್ಟಕ್ಕೆ 125 ರನ್‌ನಿಂದ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ 81.5 ಓವರ್‌ಗಳಲ್ಲಿ 245 ರನ್‌ಗೆ ಆಲೌಟಾಯಿತು. ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್(4-33)ಯಶಸ್ವಿ ಬೌಲರ್ ಎನಿಸಿಕೊಂಡರು. ಸ್ಟುವರ್ಟ್ ಬ್ರಾಡ್(2-58) ಹಾಗೂ ಮ್ಯಾಥ್ಯೂ ಪೊಟ್ಸ್(2-50)ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಪೂಜಾರ ಹಾಗೂ ಪಂತ್ 4ನೇ ವಿಕೆಟ್‌ಗೆ 78 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. ಪೂಜಾರ ಔಟಾದ ಬಳಿಕ ಪಂತ್ ಅವರು ಶ್ರೇಯಸ್ ಅಯ್ಯರ್(19)ಜೊತೆಗೆ 5ನೇ ವಿಕೆಟ್‌ಗೆ 37 ರನ್ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News