×
Ad

. ಲಿಬಿಯ ಬಳಿ ನೌಕೆ ಮುಳುಗಿ 22 ಮಂದಿ ಮೃತ್ಯು

Update: 2022-07-06 22:52 IST

 ಟ್ರಿಪೋಲಿ, ಜು.6: ಲಿಬಿಯಾದ ಕಡಲತೀರದ ಬಳಿ ನೌಕೆಯೊಂದು ಮುಳುಗಿ ಮಾಲಿಯಿಂದ ಹೊರಟಿದ್ದ 22 ಮಂದಿ ಮೃತಪಟ್ಟಿರುವುದಾಗಿ ವಿಶ್ವಸಂಸ್ಥೆ ಹಾಗೂ ಮಾಲಿ ದೇಶದ ಸರಕಾರ ದೃಢಪಡಿಸಿದೆ.

 ತಾಂತ್ರಿಕ ತೊಂದರೆಯಿಂದಾಗಿ ಕಳೆದ 9 ದಿನದಿಂದ ನೌಕೆ ಸಮುದ್ರದಲ್ಲಿ ಸ್ಥಗಿತಗೊಂಡಿತ್ತು. ನೌಕೆಯಲ್ಲಿ 83 ಮಂದಿಯಿದ್ದು ಹೆಚ್ಚಿನವರು ಮಾಲಿಯ ಪ್ರಜೆಗಳು ಎಂದು ಮಾಲಿಯ ವಿದೇಶಾಂಗ ಸಚಿವಾಲಯ ಹೇಳಿದೆ. ಹಡಗು ಮುಳುಗಿದಾಗ ಲಿಬಿಯಾದ ತಟರಕ್ಷಣಾ ಪಡೆಯವರು ತಕ್ಷಣ ಕಾರ್ಯಾಚರಣೆ ನಡೆಸಿ 61 ಮಂದಿಯನ್ನು ರಕ್ಷಿಸಿದ್ದಾರೆ. ಆದರೆ ಮಕ್ಕಳ ಸಹಿತ 22 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಇಲಾಖೆಯ ವಕ್ತಾರರು ಹೇಳಿದ್ದಾರೆ. ಬದುಕುಳಿದವರಲ್ಲಿ ಕೆಲವರ ಆರೋಗ್ಯವೂ ತೀವ್ರ ಹದಗೆಟ್ಟಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಲಿಬಿಯದ ಅಲ್‌ಮಯ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಲಿಬಿಯಾದ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News