ಗರ್ಭಪಾತ ಪ್ರಕರಣ: ಮಹಿಳೆಯರ ಗೌಪ್ಯತೆ ರಕ್ಷಿಸುವ ಆದೇಶ ಜಾರಿಗೆ ಬೈಡನ್ ನಿರ್ಧಾರ

Update: 2022-07-08 16:24 GMT

ವಾಷಿಂಗ್ಟನ್, ಜು.8: ಗರ್ಭಪಾತಕ್ಕೆ ಸಂಬಂಧಿಸಿದ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿದ್ದು , ಇದು ಇತರ ವಿಷಯಗಳ ಜತೆಗೆ ಗರ್ಭಧಾರಣೆಯನ್ನು ಕೊನೆಗೊಳಿಸಲು ಬಯಸುವ ಮಹಿಳೆಯರ ಗೌಪ್ಯತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಶ್ವೇತಭವನದ ಮೂಲಗಳು ಹೇಳಿವೆ. ಗರ್ಭಪಾತದ ಸಂವಿಧಾನ ಹಕ್ಕನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್ನ ತೀರ್ಪಿನ ನಂತರ, ಮಹಿಳೆಯರಿಗೆ ಹೆಚ್ಚು ನೆರವಾಗದಿರುವುದಕ್ಕೆ ಬೈಡನ್ ಸ್ವಪಕ್ಷೀಯರಿಂದಲೇ ಕಟು ಟೀಕೆಗೆ ಒಳಗಾಗಿದ್ದಾರೆ. ಬೈಡನ್ ಸಹಿ ಹಾಕಲಿರುವ ಆದೇಶವು ಆರೋಗ್ಯ ಸಂಬಂಧಿತ ಸೂಕ್ಷ್ಮ ದತ್ತಾಂಶಗಳ ವರ್ಗಾವಣೆ ಮತ್ತು ಮಾರಾಟ, ಸಂತಾನೋತ್ಪತ್ತಿ ಆರೋಗ್ಯ ಸೇವೆಗೆ ಸಂಬಂಧಿಸಿದ ಡಿಜಿಟಲ್ ಕಣ್ಗಾವಲು ವಿರುದ್ಧ ಹೋರಾಡುವುದು ಸೇರಿದಂತೆ ರೋಗಿಗಳ ಗೌಪ್ಯತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಶ್ವೇತಭವನ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News