ಶ್ರೀಲಂಕಾದಲ್ಲಿ ಗೊತಬಯ ರಾಜೀನಾಮೆಗೆ ಪ್ರತಿಭಟನಾಕಾರರ ಪಟ್ಟು; ಸರ್ವಪಕ್ಷಗಳ ಸರಕಾರಕ್ಕೆ ವಿರೋಧ

Update: 2022-07-12 15:59 GMT

ಕೊಲಂಬೊ, ಜು.12: ಶ್ರೀಲಂಕಾದಲ್ಲಿ ಸರ್ವಪಕ್ಷಗಳ ಸರಕಾರದ ಪ್ರಸ್ತಾವನೆಯನ್ನು ವಿರೋಧಿಸಿರುವ ಪ್ರತಿಭಟನಾಕಾರರು, ಅಧ್ಯಕ್ಷ ಗೊತಬಯ ರಾಜಪಕ್ಸ ಮತ್ತು ಪ್ರಧಾನಿ ರಣಿಲ್ ವಿಕ್ರಮಸಿಂಘೆ ಅಧಿಕೃತವಾಗಿ ರಾಜೀನಾಮೆ ಪ್ರಕಟಿಸುವವರೆಗೆ ಅಧ್ಯಕ್ಷರ ನಿವಾಸದಿಂದ ಕದಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 ದೇಶಕ್ಕೆ ಎದುರಾಗಿರುವ ಅಸಾಮಾನ್ಯ ಆರ್ಥಿಕ ಬಿಕ್ಕಟ್ಟಿಗೆ ಸರಕಾರದ ಅದಕ್ಷತೆಯೇ ಕಾರಣ ಎಂದು ಆಕ್ರೋಶಗೊಂಡಿರುವ ಸಾವಿರಾರು ಪ್ರತಿಭಟನಾಕಾರರು ಶನಿವಾರ ಅಧ್ಯಕ್ಷರ ಸರಕಾರಿ ನಿವಾಸಕ್ಕೆ ನುಗ್ಗಿದ್ದರು. ಕಳೆದ 3 ದಿನದಿಂದ ನಿವಾಸವನ್ನು ಆಕ್ರಮಿಸಿಕೊಂಡಿರುವ ಪ್ರತಿಭಟನಾಕಾರರು,
 ಅಧ್ಯಕ್ಷ ಮತ್ತು ಪ್ರಧಾನಿ ಅಧಿಕೃತವಾಗಿ ರಾಜೀನಾಮೆ ನೀಡುವವರೆಗೆ ಅಲ್ಲಿಂದ ಕದಲುವುದಿಲ್ಲ ಎಂದು ಘೋಷಿಸಿದ್ದಾರೆ. ಜುಲೈ 13ರಂದು ರಾಜೀನಾಮೆ ನೀಡುವುದಾಗಿ ಅಧ್ಯಕ್ಷ ರಾಜಪಕ್ಸ ಹೇಳಿದ್ದರೆ, ಸರ್ವಪಕ್ಷಗಳ ಮಧ್ಯಂತರ ಸರಕಾರ ರಚನೆಯಾದ ಬಳಿಕ ರಾಜೀನಾಮೆ ನೀಡುವುದಾಗಿ ಪ್ರಧಾನಿ ವಿಕ್ರಮಸಿಂಘೆ ಘೋಷಿಸಿದ್ದಾರೆ. ಆದರೆ ಸರ್ವಪಕ್ಷ ಸರಕಾರದ ಪ್ರಸ್ತಾವನೆಯನ್ನು ಪ್ರತಿಭಟನಾಕಾರರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. 
ಮೊದಲು ರಾಜಪಕ್ಸ ಮತ್ತು ವಿಕ್ರಮಸಿಂಘೆ ಅಧಿಕೃತವಾಗಿ ರಾಜೀನಾಮೆ ಪ್ರಕಟಿಸಲಿ. ಆ ಬಳಿಕ ಕನಿಷ್ಟ 6 ತಿಂಗಳು ಮಧ್ಯಂತರ ಸರಕಾರ ರಚನೆಯಾಗಲಿ. ಸರ್ವಪಕ್ಷಗಳ ಸರಕಾರಕ್ಕೆ ನಮ್ಮ ವಿರೋಧವಿದೆ ಎಂದವರು ಹೇಳಿದ್ದಾರೆ. 

ರಾಜಪಕ್ಸ ತಂತ್ರಕ್ಕೆ ವಿರೋಧ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News