×
Ad

ಸಿಂಗಾಪುರ ಓಪನ್: ಸಿಂಧು ಚಾಂಪಿಯನ್

Update: 2022-07-17 11:52 IST
Photo:PTI

ಸಿಂಗಾಪುರ: ಚೀನಾದ ವಾಂಗ್ ಝಿ ಯಿ ಅವರನ್ನು ಮಣಿಸಿದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಸಿಂಗಾಪುರ ಓಪನ್ ಪ್ರಶಸ್ತಿಯನ್ನು ಮುಡಿಗೇಡಿಸಿಕೊಂಡರು.

ರವಿವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಫೈನಲ್ ಸುತ್ತಿನ ಪಂದ್ಯದಲ್ಲಿ ಹೈದರಾಬಾದ್ ಆಟಗಾರ್ತಿ ಸಿಂಧು ಚೀನಾದ ಆಟಗಾರ್ತಿಯನ್ನು 21-9, 11-21 ಹಾಗೂ 21-15 ಗೇಮ್ ಗಳ ಸೋಲಿಸಿದರು.  

ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ 2ನೇ ಗೇಮ್ ಅನ್ನು 11-21 ಅಂತರದಿಂದ ಸೋತಿದ್ದರು. ನಿರ್ಣಾಯಕ  3ನೇ ಗೇಮ್  ನಲ್ಲಿ ಸೊಗಸಾಗಿ ತಿರುಗೇಟು ನೀಡಿದ ಸಿಂಧು  ಈ ವರ್ಷ ಚೊಚ್ಚಲ ಸೂಪರ್ 500 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಸಿಂಧು 32 ನಿಮಿಷಗಳ ಕಾಲ ನಡೆದಿದ್ದ ಸೆಮಿ ಫೈನಲ್ ನಲ್ಲಿ ಜಪಾನಿನ ಸಯೆನಾ ಕವಾಕಮಿಯವರನ್ನು ಸೋಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News