×
Ad

ವೇಗವಾಗಿ 10,000 ಅಂತರಾಷ್ಟ್ರೀಯ ರನ್‌ ಪೂರೈಸಿದ ಪಾಕ್ ನ ಮೊದಲ ಬ್ಯಾಟರ್ ಬಾಬರ್ ಆಝಂ

Update: 2022-07-17 14:56 IST
Photo:twitter

ಕೊಲಂಬೊ: ಪಾಕಿಸ್ತಾನದ ನಾಯಕ ಬಾಬರ್ ಆಝಂ ಈ ವರ್ಷ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಎಲ್ಲಾ ಸ್ವರೂಪಗಳ ಪಂದ್ಯಗಳಲ್ಲಿ ರನ್ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧ ನಡೆಯುತ್ತಿರುವ 1 ನೇ ಟೆಸ್ಟ್‌ನ ಎರಡನೇ ದಿನದಂದು ಬಾಬರ್ 10,000 ಅಂತರಾಷ್ಟ್ರೀಯ ರನ್‌ಗಳನ್ನು ಪೂರೈಸಿದರು ಹಾಗೂ  ಈ ಪ್ರಕ್ರಿಯೆಯಲ್ಲಿ ಅವರು ಈ ನಿರ್ದಿಷ್ಟ ಮೈಲಿಗಲ್ಲನ್ನು ವೇಗವಾಗಿ ತಲುಪಿದ ಪಾಕಿಸ್ತಾನ ಬ್ಯಾಟರ್ ಎನಿಸಿಕೊಂಡರು.

ಬಾಬರ್ 10,000 ಅಂತರಾಷ್ಟ್ರೀಯ ರನ್‌ಗಳನ್ನು ಗಳಿಸಲು ಕೇವಲ 228 ಇನಿಂಗ್ಸ್‌ಗಳನ್ನು ತೆಗೆದುಕೊಂಡರು. ಎರಡನೇ ಸ್ಥಾನದಲ್ಲಿರುವ ಜಾವೇದ್ ಮಿಯಾಂದಾದ್‌ಗಿಂತ 20 ಕಡಿಮೆ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು.

ಪಾಕಿಸ್ತಾನದ ಮಾಜಿ ಆರಂಭಿಕ ಬ್ಯಾಟರ್ ಸಯೀದ್ ಅನ್ವರ್ ಈ ಮೈಲಿಗಲ್ಲು ತಲುಪಲು  255 ಇನಿಂಗ್ಸ್ ತೆಗೆದುಕೊಂಡಿದ್ದರೆ, ಮುಹಮ್ಮದ್ ಯೂಸುಫ್ 261 ಇನಿಂಗ್ಸ್‌ಗಳಲ್ಲಿ ಈ ಸಾಧನೆಯನ್ನು ಪೂರ್ಣಗೊಳಿಸಿದರು. ಪಾಕಿಸ್ತಾನದ ಮಾಜಿ ನಾಯಕ ಇಂಝಮಾಮ್-ಉಲ್-ಹಕ್ 10,000 ಅಂತಾರಾಷ್ಟ್ರೀಯ ರನ್ ಗಳಿಸಲು 281 ಇನಿಂಗ್ಸ್ ತೆಗೆದುಕೊಂಡಿದ್ದರು.

ಬಾಬರ್ ಪ್ರಸ್ತುತ ಟೆಸ್ಟ್ ಶ್ರೇಯಾಂಕದಲ್ಲಿ ಜೋ ರೂಟ್, ಮಾರ್ನಸ್ ಲ್ಯಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ನಂತರ  ನಂ.4 ಸ್ಥಾನದಲ್ಲಿದ್ದಾರೆ.

ಪಾಕಿಸ್ತಾನದ ನಾಯಕ ಬಾಬರ್ ಐದನೇ ಸ್ಥಾನದಲ್ಲಿರುವ ರಿಷಬ್ ಪಂತ್‌ಗಿಂತ 14 ಅಂಕ ಮುಂದಿದ್ದಾರೆ.

ಈಗ ಕಳಪೆ ಫಾರ್ಮ್ ನಲ್ಲಿರುವ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಕಳೆದ ವಾರ ತನ್ನ ಬೆಂಬಲವನ್ನು ವ್ಯಕ್ತಪಡಿಸಿರುವ ಬಾಬರ್ ಎಲ್ಲರ ಹೃದಯ ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News