ಏಕದಿನ ಕ್ರಿಕೆಟ್‌ ಪಂದ್ಯಾಟಕ್ಕೆ ವಿದಾಯ ಘೋಷಿಸಿದ ಬೆನ್‌ ಸ್ಟೋಕ್ಸ್‌

Update: 2022-07-18 15:12 GMT

ಲಾರ್ಡ್ಸ್:‌ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯಾಟವು ತನ್ನ ಕೊನೆಯ ಏಕದಿನ ಪಂದ್ಯಾಟವಾಗಲಿದೆ ಎಂದು ಇಂಗ್ಲೆಂಡ್‌ ತಂಡದ ಖ್ಯಾತ ಕ್ರಿಕೆಟ್‌ ಆಟಗಾರ ಬೆನ್‌ ಸ್ಟೋಕ್ಸ್‌ ಹೇಳಿಕೆ ನೀಡಿದ್ದಾರೆ. ಅವರು ಇದುವರೆಗೆ 104 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಲಾರ್ಡ್‌ ನಲ್ಲಿನ 2019ರ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ನಲ್ಲಿ ಅವರು ಅತ್ಯಂತ ಪ್ರಸಿದ್ಧಿ ಪಡೆದಿದ್ದರು. 

ಇತ್ತೀಚೆಗಷ್ಟೇ ಇಂಗ್ಲೆಂಡ್‌ನ ಟೆಸ್ಟ್ ನಾಯಕರಾಗಿ ಅಧಿಕಾರ ವಹಿಸಿಕೊಂಡ 31ರ ಹರೆಯದ ಬೆನ್‌ ಸ್ಟೋಕ್ಸ್‌, ತನ್ನ ದೇಹ ಮತ್ತು ಒತ್ತಡದ ವೇಳಾಪಟ್ಟಿಗಳನ್ನು ಗಮನಿಸಿದರೆ ಮೂರು ಸ್ವರೂಪದ ಆಟಗಳಲ್ಲಿ ಆಡುವುದು ಸಮರ್ಥನೀಯ ವಿಚಾರವಲ್ಲ. ಟೆಸ್ಟ್‌ ಕ್ರಿಕೆಟ್‌ ಮತ್ತು ಟಿ-ಟ್ವೆಂಟಿಯ ಕಡೆಗೆ ನನ್ನ ಮುಂದಿನ ಗಮನ ಕೇಂದ್ರೀಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ. 

"ನಾನು ಮಂಗಳವಾರದಂದು ಡರ್ಹಾಮ್‌ ನಲ್ಲಿ ಇಂಗ್ಲೆಂಡ್‌ ಪರವಾಗಿ ನನ್ನ ಕೊನೆಯ ಏಕದಿನ ಕ್ರಿಕೆಟ್‌ ಪಂದ್ಯವನ್ನು ಆಡುತ್ತೇನೆ. ನಾನು ಈ ಪ್ರಕಾರದ ಆಟದಿಂದ ನಿವೃತ್ತಿ ಹೊಂದಲು ಬಯಸಿದ್ದೇನೆ. ಇದು ನನಗೇ ನಂಬಲಾಗದಷ್ಟು ಕಠಿಣ ನಿರ್ಧಾರವಾಗಿದೆ. ನಾನು ಇಂಗ್ಲೆಂಡ್‌ ತಂಡಕ್ಕಾಗಿ ಆಡುವ ಪ್ರತಿಯೊಂದು ನಿಮಿಷವನ್ನೂ ಪ್ರೀತಿಸುತ್ತೇನೆ" ಎಂದು ಇಸಿಬಿ ಬಿಡುಗಡೆಯಲ್ಲಿ ಅವರು ತಮ್ಮ ಹೇಳಿಕೆ ನೀಡಿದ್ದಾರೆ. 

ವಿರಾಟ್‌ ಕೊಹ್ಲಿ ಸೇರಿದಂತೆ ಹಲವಾರು ಆಟಗಾರರು ಬೆನ್‌ ಸ್ಟೋಕ್ಸ್‌ ರ ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News