'ಐ ಹ್ಯಾವ್ ಕ್ಯಾನ್ಸರ್' ಎಂದ ಅಮೆರಿಕಾ ಅಧ್ಯಕ್ಷ ಜೋ ಬೈಡನ್: ಶ್ವೇತಭವನದಿಂದ ಸ್ಪಷ್ಟೀಕರಣ

Update: 2022-07-21 14:05 GMT

ವಾಷಿಂಗ್ಟನ್: ಸೋಮರ್ಸೆಟ್‍ನಲ್ಲಿರುವ ಹಿಂದಿನ ಕಲ್ಲಿದ್ದಲು ಗಣಿ ಸ್ಥಾವರಕ್ಕೆ ಭೇಟಿ ನೀಡಿದ್ದ ಸಂದರ್ಭ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ನೀಡಿದ ಭಾಷಣದ ವೇಳೆ ʼಐ ಹ್ಯಾವ್ ಕ್ಯಾನ್ಸರ್' (ನನಗೆ ಕ್ಯಾನ್ಸರ್ ಇದೆ) ಎಂಬ ಮಾತನ್ನು ಹೇಳಿಕೊಂಡಿದ್ದರು ಸಾಕಷ್ಟು ಸಂಚಲನದ ಜೊತೆಗೆ ಆತಂಕವನ್ನೂ ಸೃಷ್ಟಿಸಿತ್ತು. ಕೊನೆಗೆ ಶ್ವೇತಭವನ ಸ್ಪಷ್ಟೀಕರಣ ನೀಡಿ, ಅಧ್ಯಕ್ಷರು ತಾವು ಅಧ್ಯಕ್ಷ ಹುದ್ದೆ ಏರುವ ಮುನ್ನ ಕಳೆದ ವರ್ಷ ಒಳಗಾಗಿದ್ದ ಚರ್ಮದ ಕ್ಯಾನ್ಸರ್ ಚಿಕಿತ್ಸೆ ಕುರಿತು ಮಾತನಾಡಿದ್ದರು ಎಂದು ಹೇಳಿದೆ.

ತಮ್ಮ ಭಾಷಣದ ವೇಳೆ ಜಾಗತಿಕ ತಾಪಮಾನ ಏರಿಕೆ ಹಾಗೂ ಡೆಲವೇರ್‍ನ ಕ್ಲೇಮೋಂಟ್ ಸಮೀಪದ ತೈಲಾಗಾರಗಳ ಹೊರಸೂಸುವಿಕೆಗಳ ಕುರಿತು ಅವರು ಉಲ್ಲೇಖಿಸುವ ವೇಳೆ  ಮೇಲಿನ ಮಾತುಗಳನ್ನಾಡಿದ್ದರು.

"ನನ್ನ ತಾಯಿ ನಮ್ಮನ್ನು ನಡೆಸಿಕೊಂಡು ಹೋಗುವ ಬದಲು ಕಾರಿನಲ್ಲಿ ಕರೆದೊಯ್ದಿದ್ದರು. ಏನಾಯಿತು ಗೊತ್ತೇ? ಕಾರಿನ ಗಾಜಿನಲ್ಲಿ ತೈಲದ ಅಂಶಗಳಿಂದಾಗಿ ನಾವು ವಿಂಡ್‍ಶೀಲ್ಡ್ ವೈಪರ್‍ಗಳನ್ನು ಬಳಸಬೇಕಾಯಿತು. ಅದರಿಂದಾಗಿಯೇ ನಾನು, ಮತ್ತು ನಾನು ಜೊತೆಯಾಗಿ ಬೆಳೆದ ಹಲವರಿಗೆ ಕ್ಯಾನ್ಸರ್ ಇದೆ. ಡೆಲವೇರ್ ದೇಶದಲ್ಲಿಯೇ ಗರಿಷ್ಠ ಕ್ಯಾನ್ಸರ್ ಪ್ರಕರಣಗಳನ್ನು ಹೊಂದಿದೆ" ಎಂದು ಅವರು ಹೇಳಿದರು.

ಆವರ ಈ ಮಾತುಗಳು ಸಂಚಲನ ಸೃಷ್ಟಿಸಿದ ನಂತರ ಶ್ವೇತಭವನದ ಸ್ಪಷ್ಟೀಕರಣ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News