ಯುದ್ಧಾಪರಾಧಗಳ ಬಗೆಗಿನ ವಿಚಾರಣೆಗೆ ನ್ಯಾಯಮಂಡಳಿ ರಚನೆ: ರಶ್ಯ

Update: 2022-07-25 16:46 GMT

ಮಾಸ್ಕೋ (ರಶ್ಯ), ಜು. 25: ಉಕ್ರೇನ್ ಸಶಸ್ತ್ರ ಪಡೆಗಳಿಗೆ ಸೇರಿದ 92 ಸದಸ್ಯರ ವಿರುದ್ಧ ರಶ್ಯವು ಮಾನವತೆಯ ವಿರುದ್ಧ ಅಪರಾಧ ನಡೆಸಿದ ಆರೋಪಗಳನ್ನು ಹೊರಿಸಿದ್ದು, ಅವರ ವಿಚಾರಣೆಗಾಗಿ ಅಂತರ್ರಾಷ್ಟ್ರೀಯ ನ್ಯಾಯಮಂಡಳಿಯನ್ನು ರಚಿಸಲು ಮುಂದಾಗಿದೆ.

ಉಕ್ರೇನ್ನ ಸಮಗ್ರ ಮುಂಚೂಣಿ ಸ್ಥಳಗಳ ಮೇಲೆ ಹಾಗೂ ಇತರ ಸ್ಥಳಗಳಲ್ಲಿಯೂ ರಶ್ಯವು ಕಳೆದ 24 ಗಂಟೆಗಳಲ್ಲಿ ಶೆಲ್ ದಾಳಿಗಳನ್ನು ನಡೆಸಿದೆ ಎಂದು ಉಕ್ರೇನ್ ಹೇಳಿದೆ.

ಉಕ್ರೇನ್ನಲ್ಲಿರುವ ‘ಹಿಮಾರ್ಸ್’ ಡಿಪೋವೊಂದನ್ನು ನಾಶಪಡಿಸಿರುವುದಾಗಿ ಮಾಸ್ಕೋ ಹೇಳಿದೆ. ಅದೇ ವೇಳೆ, ರಶ್ಯದ 50 ಮದ್ದುಗುಂಡು ಡಿಪೋಗಳನ್ನು ಅಮೆರಿಕ ನಿರ್ಮಿತ ವ್ಯವಸ್ಥೆಗಳ ಮೂಲಕ ನಾಶಪಡಿಸಿರುವುದಾಗಿ ಉಕ್ರೇನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News