ಏಶ್ಯಕಪ್ ಟ್ವೆಂಟಿ-20 ವೇಳಾಪಟ್ಟಿ ಪ್ರಕಟ: ಆಗಸ್ಟ್ 28ರಂದು ಭಾರತ-ಪಾಕ್ ಸೆಣಸಾಟ

Update: 2022-08-02 13:45 GMT
Photo:twitter

ದುಬೈ, ಆ.2: ಏಶ್ಯಕಪ್ ಟ್ವೆಂಟಿ-20 ಟೂರ್ನಿಯಲ್ಲಿ ಭಾರತವು ಆಗಸ್ಟ್ 28ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ ಎಂದು ಏಶ್ಯ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಅಧ್ಯಕ್ಷ ಜಯ್ ಶಾ ಮಂಗಳವಾರ ಪ್ರಕಟಿಸಿದ್ದಾರೆ.

ಏಶ್ಯಕಪ್‌ಗೆ ಆಯ್ಕೆ ಮಾಡಲಾಗುವ ಭಾರತ ತಂಡವು ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲೂ ಸ್ಪರ್ಧಿಸುವ ಸಾಧ್ಯತೆಯಿದೆ. ದ್ವೀಪರಾಷ್ಟ್ರದಲ್ಲಿ ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಏಶ್ಯಕಪ್ ಟೂರ್ನಿಯು ಕೊನೆಯ ಕ್ಷಣದಲ್ಲಿ ಶ್ರೀಲಂಕಾದಿಂದ ಯುಎಇಗೆ ಸ್ಥಳಾಂತರವಾಗಿದೆ.

‘‘ಆಗಸ್ಟ್ 27ರಂದು ಮೊದಲ ಪಂದ್ಯ ನಡೆಯಲಿದ್ದು, ಸೆಪ್ಟಂಬರ್ 11ರಂದು ಫೈನಲ್ ಪಂದ್ಯ ನಿಗದಿಪಡಿಸಲಾಗಿದೆ. 15ನೇ ಆವೃತ್ತಿಯ ಏಶ್ಯಕಪ್ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ ಉತ್ತಮ ಪೂರ್ವ ತಯಾರಿಯಾಗಿದೆ ’’ಎಂದು ಶಾ ಹೇಳಿದ್ದಾರೆ.

‘ಎ’ ಗುಂಪು: ಭಾರತ, ಪಾಕಿಸ್ತಾನ, ಕ್ವಾಲಿಫೈಯರ್

‘ಬಿ’ ಗುಂಪು: ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ

ವೇಳಾಪಟ್ಟಿ

ಆಗಸ್ಟ್ 27: ಶ್ರೀಲಂಕಾ-ಅಫ್ಘಾನಿಸ್ತಾನ(ದುಬೈ)
ಆಗಸ್ಟ್ 28: ಭಾರತ-ಪಾಕಿಸ್ತಾನ(ದುಬೈ)
ಆಗಸ್ಟ್ 30: ಬಾಂಗ್ಲಾದೇಶ-ಅಫ್ಘಾನಿಸ್ತಾನ(ಶಾರ್ಜಾ)
ಆಗಸ್ಟ್ 31: ಭಾರತ-ಕ್ವಾಲಿಫೈಯರ್(ದುಬೈ)
ಸೆಪ್ಟಂಬರ್ 1: ಶ್ರೀಲಂಕಾ-ಬಾಂಗ್ಲಾದೇಶ(ದುಬೈ)
 ಸೆ. 2: ಪಾಕಿಸ್ತಾನ-ಕ್ವಾಲಿಫೈಯರ್(ಶಾರ್ಜಾ)

ಸೂಪರ್ ಫೋರ್ಸ್

ಸೆ.3: ಬಿ1-ಬಿ2(ಶಾರ್ಜಾ)
ಸೆ.4: ಎ1-ಎ2(ದುಬೈ)
ಸೆ.6: ಎ1-ಬಿ1(ದುಬೈ)
ಸೆ.7: ಎ2-ಬಿ 2(ದುಬೈ)
ಸೆ.8: ಎ1-ಬಿ2(ದುಬೈ)
ಸೆ.9: ಬಿ1-ಎ2(ದುಬೈ)
ಸೆ.11: ಫೈನಲ್(ದುಬೈ)
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News