ವೆಸ್ಟ್ ಇಂಡೀಸ್ ವಿರುದ್ಧ‌ ಟಿ-20 ಕ್ರಿಕೆಟ್‌ ಪಂದ್ಯಾಟ; ಭಾರತಕ್ಕೆ ಸರಣಿ ಜಯ

Update: 2022-08-07 02:23 GMT

ಫ್ಲೋರಿಡಾ: ಇಲ್ಲಿನ ಸೆಂಟ್ರಲ್ ಬ್ರೊವರ್ಡ್ ರೀಜನಲ್ ಪಾರ್ಕ್‍ನಲ್ಲಿ ಶನಿವಾರ ನಡೆದ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 59 ರನ್‍ಗಳ ಜಯ ಸಾಧಿಸಿದ ಭಾರತ ತಂಡ, ಸರಣಿಯಲ್ಲಿ ಒಂದು ಪಂದ್ಯ ಬಾಕಿ ಇರುವಂತೆಯೇ 3-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.

ಗೆಲುವಿಗೆ 192 ರನ್‍ಗಳ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 19.1 ಓವರ್ ಗಳಲ್ಲಿ ಕೇವಲ 132 ರನ್‍ಗಳಿಗೆ ಆಲೌಟ್ ಆಯಿತು.  ಇದಕ್ಕೂ ಮುನ್ನ ರಿಷಬ್ ಪಂತ್ 31 ಎಸೆತಗಳಲ್ಲಿ 44 ರನ್ ಸಿಡಿಸಿ ಭಾರತ ಗೌರವಾರ್ಹ ಮೊತ್ತ (5 ವಿಕೆಟ್‍ಗೆ 191) ಗಳಿಸಲು ನೆರವಾದರು. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರು ಭಾರತಕ್ಕೆ ಮಿಂಚಿನ ಆರಂಭ ದೊರಕಿಸಿಕೊಟ್ಟ ಬಳಿಕ ಪಂತ್ ಭಾರತದ ಇನಿಂಗ್ಸ್ ಆಧರಿಸಿದರು. ‌

ವೆಸ್ಟ್‌ ಇಂಡೀಸ್ ವಿರುದ್ಧ ಏಕದಿನ ಸರಣಿ: ಕ್ಲೀನ್‍ಸ್ವೀಪ್ ಸಾಧಿಸಿದ ಭಾರತ

ರೋಹಿತ್ ಶರ್ಮಾ 16 ಬಾಲ್‍ಗಳಲ್ಲಿ 33 ರನ್ ಗಳಿಸಿ, ಅಕೇಲ್ ಹೊಸಿಯಾನ್‍ಗೆ ವಿಕೆಟ್ ಒಪ್ಪಿಸಿದರು. 14 ಎಸೆತಗಳಲ್ಲಿ 24 ರನ್ ಗಳಿಸಿದ ಯಾವದ್, ಅಲ್ಜರಿ ಜೋಸೆಫ್ ಅವರ ಎಲ್‍ಬಿಡಬ್ಲ್ಯು ಬಲೆಗೆ ಬಿದ್ದರು. ಅಕ್ಷರ್ ಪಟೇಲ್ ಕೂಡಾ 8 ಎಸೆತಗಳಲ್ಲಿ 20 ರನ್ ಸಿಡಿಸಿ, ಕೊನೆ ಓವರ್‌ ನಲ್ಲಿ ಭಾರತದ ರನ್ ಹೆಚ್ಚಳಕ್ಕೆ ಕಾರಣರಾದರು.

ಪ್ರತಿಕೂಲ ಹವಾಮಾನದಿಂದಾಗಿ ಟಾಸ್ ವಿಳಂಬವಾಗಿತ್ತು. ರವಿವಾರ ಇದೇ ಸ್ಟೇಡಿಯಂನಲ್ಲಿ ಅಂತಿಮ ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News