ತೀವ್ರ ಜ್ವರದಿಂದ ಗಂಭೀರ ಅನಾರೋಗ್ಯಕ್ಕೊಳಗಾಗಿದ್ದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್: ಸಹೋದರಿಯಿಂದ ಬಹಿರಂಗ

Update: 2022-08-11 08:32 GMT

ಪ್ಯೊಂಗ್ಯಾಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (Kim Jong Un) ಅವರು ದೇಶದಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳ ಏರಿಕೆ ವೇಳೆ ತೀವ್ರ ಜ್ವರದಿಂದ ಬಹಳ ಅನಾರೋಗ್ಯಕ್ಕೀಡಾಗಿದ್ದರು ಎಂದು ಅವರ ಸಹೋದರಿ ಕಿಮ್ ಯೋ ಜೊಂಗ್ ಹೇಳಿದ್ದಾರೆ. ತಮ್ಮ ದೇಶದಲ್ಲಿ ಕೋವಿಡ್ ಪ್ರಕರಣಗಳ ಏರಿಕೆಗೆ ದಕ್ಷಿಣ ಕೊರಿಯಾ ಕಾರಣ, ಕರಪತ್ರಗಳಿರುವ ಬಲೂನುಗಳನ್ನು ಗಡಿಯಾಚೆಗೆ ಹಾರಿಸಿ ಅವುಗಳಿಂದ ತಮ್ಮ ದೇಶದಲ್ಲಿ ಕೋವಿಡ್ ಏರಿಕೆ ಕಾರಣವಾಗಿದೆ ಎಂದು ಹೇಳಿರುವ ಅವರು ಇಂತಹ ಕ್ರಮಗಳನ್ನು ಮುಂದುವರಿಸಿದರೆ ದಕ್ಷಿಣ ಕೊರಿಯಾ ಆಡಳಿತವನ್ನು ನಿರ್ಮೂಲನಗೈಯ್ಯುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.

ದಢೂತಿ ದೇಹ ಒಂದೆಡೆಯಾದರೆ ಸಿಗರೇಟ್ ಸೇವನೆ ಚಟವನ್ನೂ ಹೊಂದಿರುವ ಕಿಮ್ ಜೊಂಗ್ ಉನ್ ಅವರ ಆರೋಗ್ಯ (health) ಸ್ಥಿತಿಯ ಬಗ್ಗೆ ಹಿಂದೆಯೂ ಗುಮಾನಿಯಿತ್ತಾದರೂ ಅವರ ಅನಾರೋಗ್ಯವನ್ನು ಮೊದಲ ಬಾರಿ  ಇದೀಗ ಅವರ ಸಹೋದರಿ ಒಪ್ಪಿಕೊಂಡಿದ್ದಾರೆ.

ಇತ್ತೀಚೆಗೆ ನೀಡಿದ ಭಾಷಣದಲ್ಲಿ ಕಿಮ್ ಯೋ ಜೊಂಗ್ ಅವರು  ತಮ್ಮ ಸಹೋದರ ಗಂಭೀರ ತೀವ್ರ ಜ್ವರದಿಂದ ಗಂಭೀರ ಅನಾರೋಗ್ಯಕ್ಕೊಳಗಾಗಿದ್ದರೂ ದೇಶದ ಜನರ ಬಗ್ಗೆ ಅವರಿಗಿದ್ದ ಕಾಳಜಿಯ ಕಾರಣದಿಂದ ಅವರು ಒಂದು ಕ್ಷಣವೂ ವಿರಮಿಸಿಲ್ಲ ಎಂದಿದ್ದಾರೆ.

ದೇಶದಲ್ಲಿ  ಸಾವಿರಾರು ಮಂದಿ ಜ್ವರಕ್ಕೆ ತುತ್ತಾಗುತ್ತಿದ್ದರೂ ಅದು ಕೋವಿಡ್ (Covid) ಎಂದು ಒಪ್ಪಿಕೊಳ್ಳಲು ಅಲ್ಲಿನ ಆಡಳಿತ ಸಿದ್ಧವಿಲ್ಲ, ದೇಶದಲ್ಲಿ ಕೋವಿಡ್ ಪರೀಕ್ಷೆ ಕಿಟ್ ಕೊರತೆ ಇರುವುದು ಒಂದೆಡೆಯಾದರೆ ಇನ್ನೊಂದೆಡೆ ಹೊರಗಿನ ದೇಶಗಳಿಂದ ಲಸಿಕೆಗಳನ್ನೂ ಪಡೆಯಲು ಹಿಂದೇಟು ಹಾಕಿದೆ.

ಇದನ್ನೂ ಓದಿ: 7 ಬಿಲಿಯನ್‌ ಡಾಲರ್ ಮೌಲ್ಯದ ಟೆಸ್ಲಾ ಷೇರು ಮಾರಿದ ಎಲಾನ್ ಮಸ್ಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News