ಮಂಕಿಪಾಕ್ಸ್ ಲಸಿಕೆ 100% ಪರಿಣಾಮಕಾರಿಯಲ್ಲ: ವಿಶ್ವ ಆರೋಗ್ಯ ಸಂಸ್ಥೆ

Update: 2022-08-18 15:57 GMT
PHOTO : ndtv

ಜಿನೆವಾ, ಆ.18: ಮಂಕಿಪಾಕ್ಸ್ ಸಾಂಕ್ರಾಮಿಕದ ವಿರುದ್ಧದ ಲಸಿಕೆ 100% ಪರಿಣಾಮಕಾರಿಯಲ್ಲ. ಆದ್ದರಿಂದ ಜನತೆ ತಾವು ಸೋಂಕಿಗೆ ಒಳಗಾಗುವ ಅಪಾಯವನ್ನು ಕಡಿಮೆಗೊಳಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥೆ ರೊಸಮಂಡ್ ಲಿವಿಸ್ ಹೇಳಿದ್ದಾರೆ. ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ‘ಮಂಕಿಪಾಕ್ಸ್ ತಡೆಯಲು ಈಗಿರುವ ಲಸಿಕೆಗಳು 100%ದಷ್ಟು ಪರಿಣಾಮಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರೀಕ್ಷಿಸಿಲ್ಲ. ನಮಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ.

ಲಸಿಕೆ ಬೆಳ್ಳಿಯ ಬುಲೆಟ್ ಅಲ್ಲ ಎಂಬುದನ್ನು ಇದು ನಮಗೆ ನೆಪಿಸುತ್ತದೆ. ನಮಗೆ ಅಪಾಯವಿದೆ ಎಂದು ಎಲ್ಲಾ ವ್ಯಕ್ತಿಗಳೂ ಭಾವಿಸಿದರೆ ಮತ್ತು ಅಪಾಯವನ್ನು ಕಡಿಮೆಗೊಳಿಸುವ ಮಾರ್ಗೋಪಾಯಗಳು ತಮ್ಮ ಬಳಿಯೇ ಇವೆ ಎಂದು ನೆನಪಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ಲಭ್ಯ ಲಸಿಕೆ ಮಾತ್ರವಲ್ಲ, ಸಾಂಕ್ರಾಮಿಕಕ್ಕೆ ತುತ್ತಾಗುವ ಕ್ರಿಯೆಗಳಿಂದ ದೂರ ಇರುವುದೂ ಇದರಲ್ಲಿ ಸೇರಿದೆ’ ಎಂದರು.

ಕಳೆದ ವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್, ಈ ವಾರ ಸುಮಾರು 7,500 ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು ಇದು ಇದಕ್ಕೂ ಹಿಂದಿನ ವಾರಕ್ಕಿಂತ 20% ಅಧಿಕವಾಗಿದೆ. ಯುರೋಪ್ ಮತ್ತು ಅಮೆರಿಕದಲ್ಲಿ ಅತ್ಯಧಿಕ ಪ್ರಕರಣ ವರದಿಯಾಗಿದೆ. ವಿಶ್ವದಾದ್ಯಂತ 92 ದೇಶಗಳಲ್ಲಿ ಮಂಕಿಪಾಕ್ಸ್ನ 35,000ಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು 12 ಸಾವು ಸಂಭವಿಸಿದೆ’ ಎಂದು ಮಾಹಿತಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News