ಆರ್ಥಿಕ ಅಪರಾಧಗಳನ್ನು ನಡೆಸಿದ ಚೈನೀಸ್-ಕೆನಡಿಯನ್ ಉದ್ಯಮಿಗೆ 13 ವರ್ಷ ಜೈಲು

Update: 2022-08-19 16:36 GMT

ಶಾಂಘೈ (ಚೀನಾ), ಆ. 19: ಆರ್ಥಿಕ ಅಪರಾಧಗಳನ್ನು ನಡೆಸಿರುವುದಕ್ಕಾಗಿ ಚೈನೀಸ್-ಕೆನಡಿಯನ್ ಉದ್ಯಮಿ ಕ್ಸಿಯಾವೊ ಜಿಯಾನ್ಹುವ ಅವರಿಗೆ 13 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದಾಗಿ ಶಾಂಘೈಯ ನ್ಯಾಯಾಲಯವೊಂದು ಶುಕ್ರವಾರ ತಿಳಿಸಿದೆ.

ಅವರನ್ನು 2017ರಲ್ಲಿ ಹಾಂಕಾಂಗ್ ನ ಹೊಟೇಲೊಂದರಿಂದ ಅಪಹರಿಸಲಾಗಿತ್ತು. ಚೀನಾದ ಅತಿ ಶ್ರೀಮಂತರ ಪೈಕಿ ಒಬ್ಬರಾಗಿದ್ದ ಅವರು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಉನ್ನತ ನಾಯಕತ್ವದೊಂದಿಗೆ ನಿಕಟ ಸಂಪರ್ಕಹೊಂದಿದ್ದರು ಎನ್ನಲಾಗಿದೆ. ಕೆನಡದ ಪ್ರಜೆಯಾಗಿರುವ ಕ್ಸಿಯಾವೊ ಬಗ್ಗೆ ಈ ವರ್ಷದ ಜುಲೈವರೆಗೂ ಯಾವುದೇ ಮಾಹಿತಿ ಇರಲಿಲ್ಲ. ಅವರು ವಿಚಾರಣೆ ಎದುರಿಸುತ್ತಿದ್ದಾರೆ ಎಂಬುದಾಗಿ ಜುಲೈಯಲ್ಲಿ ಕೆನಡ ಹೇಳಿದೆ.

ಕ್ಸಿಯಾವೊ ವಿಚಾರಣೆಗೆ ಹಾಜರಾಗಲು ತನ್ನ ರಾಜತಾಂತ್ರಿಕರಿಗೆ ಅನುಮತಿ ನಿರಾಕರಿಸಲಾಗಿತ್ತು ಎಂಬುದಾಗಿ ಕೆನಡದ ರಾಯಭಾರ ಕಚೇರಿ ಜುಲೈಯಲ್ಲಿ ಹೇಳಿತ್ತು. ಚೀನಾದ ಏಜಂಟರು ಕ್ಸಿಯಾವೊರನ್ನು ಅಪಹರಿಸಿದ್ದಾರೆ ಎಂಬುದಾಗಿ ಅವರ ನಾಪತ್ತೆ ಸಂದರ್ಭದಲ್ಲಿ ಹಾಂಕಾಂಗ್ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News