×
Ad

ವಿಶ್ವ ಚಾಂಪಿಯನ್‌ಶಿಪ್: ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಸೆಮಿ ಫೈನಲ್ ಗೆ

Update: 2022-08-26 10:28 IST
Photo:PTI

ಹೊಸದಿಲ್ಲಿ: ಬಿಡಬ್ಲ್ಯು ಎಫ್ ವಿಶ್ವ ಚಾಂಪಿಯನ್‌ಶಿಪ್ 2022 ನಲ್ಲಿ  (BWF World Championships )ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಹಾಗೂ  ಚಿರಾಗ್‌ ಶೆಟ್ಟಿ (Satwiksairaj Rankireddy-Chirag Shetty)ಅವರು ಜಪಾನ್‌ನ  ಟಕುರೊ ಹೊಕಿ ಮತ್ತು ಯುಗೊ ಕೊಬಯಾಶಿ ಅವರನ್ನು ಸೋಲಿಸಿ ಪುರುಷರ ಡಬಲ್ಸ್‌ನ ಸೆಮಿಫೈನಲ್‌ಗೆ ಪ್ರವೇಶಿಸಿದರು.

ಮೊದಲ ಗೇಮ್ ಅನ್ನು 24-22 ರಿಂದ ಗೆದ್ದುಕೊಂಡ ಭಾರತದ ಜೋಡಿ 2ನೇ ಗೇಮ್ ಅನ್ನು 15-21 ರಲ್ಲಿ ಸೋಲುಂಡಿತು. ಆ ನಂತರ 3ನೇ ಗೇಮ್ ಅನ್ನು 21-14 ರಲ್ಲಿ ಗೆದ್ದುಕೊಂಡಿತು.

ಇದಕ್ಕೂ ಮುನ್ನ ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ಎಂಆರ್ ಅರ್ಜುನ್ ಮತ್ತು ಧ್ರುವ್ ಕಪಿಲಾ ಇಂಡೋನೇಷ್ಯಾದ ಜೋಡಿ ಮುಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯಾವಾನ್ ವಿರುದ್ಧ 8-21, 14-21 ಅಂತರದಲ್ಲಿ ಸೋತಿತು.

 ಮತ್ತೊಂದೆಡೆ, ಪ್ರಣಯ್ ಅವರು 16 ರ ಸುತ್ತಿನಲ್ಲಿ ಭಾರತದ ಉದಯೋನ್ಮುಖ ತಾರೆ ಲಕ್ಷ್ಯ ಸೇನ್ ಅವರನ್ನು ಸೋಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News