ಇರಾಕ್ ನ ಗ್ರೀನ್‌ಝೋನ್ ಬಳಿ ಸ್ಫೋಟ

Update: 2022-08-26 16:49 GMT

ಬಗ್ದಾದ್, ಆ.೨೬: ಇರಾಕ್ ರಾಜಧಾನಿ ಬಗ್ದಾದ್ನ ಅತ್ಯಂತ ಬಿಗಿಭದ್ರತೆಯ ಗ್ರೀನ್‌ಝೋನ್(ಅಂತರಾಷ್ಟ್ರೀಯ ವಲಯ)ದ ಬಳಿ ಆಸ್ಟ್ರೇಲಿಯಾದ ರಾಜತಾಂತ್ರಿಕರನ್ನು ಗುರಿಯಾಗಿಸಿ ಶುಕ್ರವಾರ ಸ್ಫೋಟ ಸಂಭವಿಸಿದೆ. ಆದರೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಮೂಲಗಳು ಹೇಳಿವೆ.

‌ಆಸ್ಟ್ರೇಲಿಯಾ ರಾಜತಾಂತ್ರಿಕರ ವಾಹನಗಳು ಹಾದುಹೋಗುತ್ತಿದ್ದ ಸಂದರ್ಭದಲ್ಲೇ ಸ್ಫೋಟ ಸಂಭವಿಸಿದೆ. ಸ್ಥಳೀಯವಾಗಿ ನಿರ್ಮಿಸಲಾಗಿದ್ದ ಸುಧಾರಿತ ಸಾಧನ ಸ್ಫೋಟಿಸಿದೆ, ಆದರೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇರಾಕ್ನಲ್ಲೇ ಅತ್ಯಂತ ಸುರಕ್ಷಿತ ಪ್ರದೇಶ ಎನಿಸಿರುವ ಗ್ರೀನ್ಝೋನ್ ವಲಯದಲ್ಲಿ ಸರಕಾರಿ ಇಲಾಖೆಗಳು ಮತ್ತು ವಿದೇಶಗಳ ರಾಯಭಾರಿ ಕಚೇರಿಗಳು ಕಾರ್ಯಾಚರಿಸುತ್ತಿವೆ.

ಇರಾಕ್ ನ ರಾಜಕೀಯ ಬಿಕ್ಕಟ್ಟಿಗೆ ಅಂತ್ಯಹೇಳುವ ನಿಟ್ಟಿನಲ್ಲಿ  ಪ್ರಭಾವೀ ಶಿಯಾ ಧರ್ಮಗುರು ಮುಖ್ತಾದ ಅಲ್ಸದರ್ ಮತ್ತು ಪ್ರತಿಸ್ಪರ್ಧಿ ಶಿಯಾ ಪಕ್ಷಗಳ ಇರಾನ್ ಬೆಂಬಲಿತ ಬಣಗಳ ಮಧ್ಯೆ ಮಧ್ಯಸ್ಥಿಕೆ ವಹಿಸಲು ಆಸ್ಟ್ರೇಲಿಯಾದ ರಾಜತಾಂತ್ರಿಕ ಕಾರ್ಯಾಚರಣೆಯ ಪ್ರಯತ್ನಗಳ ನಡುವೆಯೇ ಈ ಸ್ಫೋಟ ಸಂಭವಿಸಿದೆ.

ಅಕ್ಟೋಬರ್ನಲ್ಲಿ ನಡೆದ ಚುನಾವಣೆಯಲ್ಲಿ ಅಲ್ಸದರ್ ಪಕ್ಷ ಅತ್ಯಧಿಕ ಸ್ಥಾನದಲ್ಲಿ ಗೆದ್ದರೂ ಬಹುಮತದ ಸರಕಾರ ರಚಿಸಲು ವಿಫಲವಾದ ಬಳಿಕ ಮುಸ್ತಫಾ ಅಲ್ಕಧಿಮಿ ಹಂಗಾಮಿ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ಆದರೆ ಸಂಸತ್ತನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಬೇಕೆಂದು ಆಗ್ರಹಿಸಿ ಅಲ್ಸದರ್ ಬೆಂಬಲಿಗರು ಸಂಸತ್ಗೆ ನುಗ್ಗಿ ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News