ಪಾಕಿಸ್ತಾನದ ವಿರುದ್ಧ ಏಶ್ಯಕಪ್ ನಲ್ಲಿ ಮಹತ್ವದ ಸಾಧನೆ ಮಾಡಲಿರುವ ವಿರಾಟ್ ಕೊಹ್ಲಿ

Update: 2022-08-27 15:05 GMT
Photo:PTI

ಹೊಸದಿಲ್ಲಿ: ಭಾರತವು ರವಿವಾರ ದುಬೈನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಏಶ್ಯಕಪ್ ಅಭಿಯಾನ (Asia Cup 2022)ಆರಂಭಿಸಲಿದೆ.  ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ತನ್ನ ತಂಡದ ಪರ 100ನೇ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ.  ಕ್ರಿಕೆಟ್ ಇತಿಹಾಸದಲ್ಲಿ  ಪಂದ್ಯದ ಎಲ್ಲಾ 3 ಮಾದರಿಗಳಲ್ಲಿ ನೂರು ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

2008 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ  ಚೊಚ್ಚಲ ಪಂದ್ಯದ ಆಡಿದ ಬಳಿಕ ವಿರಾಟ್ ಪ್ರತಿ ಮಾದರಿಯ ಕ್ರಿಕೆಟ್ ನಲ್ಲಿ 100 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸುವ ಅಪೂರ್ವ ಅವಕಾಶ ಲಭಿಸಿರುವುದು  ಅವರ ಸಾಮರ್ಥ್ಯ, ಸ್ಥಿರ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

ಇಲ್ಲಿಯವರೆಗೆ ವಿರಾಟ್ 99 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಅವರು 50.12 ರ ಸರಾಸರಿಯಲ್ಲಿ 3,308 ರನ್ ಗಳಿಸಿದ್ದಾರೆ. ಟ್ವೆಂಟಿ-20ಯಲ್ಲಿ  ಭಾರತಕ್ಕಾಗಿ ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ 94 ಗಳಿಸಿದ್ದಾರೆ. ಟಿ-20 ಸ್ವರೂಪದಲ್ಲಿ 30 ಅರ್ಧ ಶತಕಗಳನ್ನು ಗಳಿಸಿದ್ದಾರೆ.

2017-2021 ರ ನಡುವೆ  ಈ ಸ್ಟಾರ್ ಬ್ಯಾಟರ್ ತನ್ನ ತಂಡವನ್ನು  50  ಪಂದ್ಯಗಳಲ್ಲಿ ನಾಯಕನಾಗಿ ಮುನ್ನಡೆಸಿದ್ದಾರೆ. ಈ 50 ಪಂದ್ಯಗಳಲ್ಲಿ ಅವರು 30ರಲ್ಲಿ ಗೆದ್ದಿದ್ದಾರೆ. 16 ರಲ್ಲಿ ಸೋತಿದ್ದಾರೆ. ಎರಡು ಪಂದ್ಯಗಳು ಟೈನಲ್ಲಿ ಅಂತ್ಯಗೊಂಡರೆ ಎರಡು ಫಲಿತಾಂಶ ನೀಡಲು ವಿಫಲವಾಗಿದೆ. ಈ ಸ್ವರೂಪದಲ್ಲಿ ನಾಯಕನಾಗಿ ಅವರ ಗೆಲುವಿನ ಶೇಕಡಾವಾರು 64.58 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News