ಏಷ್ಯಾ ಕಪ್‌: ಪಾಕ್ ವಿರುದ್ಧ ಭಾರತಕ್ಕೆ ರೋಚಕ ಜಯ

Update: 2022-08-28 18:16 GMT
Photo: Twitter/@bcci

ದುಬೈ: ಭಾರತವು 2022ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ 5 ವಿಕೆಟ್‌ಗಳ ಗೆಲುವು ಪಡೆದುಕೊಂಡಿದೆ. ವಿರಾಟ್ ಕೊಹ್ಲಿ (35), ರವೀಂದ್ರ ಜಡೇಜ (35) ಮತ್ತು ಹಾರ್ದಿಕ್ ಪಾಂಡ್ಯ(33) ಸಹಾಯದಿಂದ ರೋಚಕ ಗೆಲುವು ಸಾಧಿಸಿದೆ.

ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿದ ಭಾರತದ ಬೌಲರ್‌ ಗಳ ಮಾರಕ ದಾಳಿಗೆ ಪಾಕಿಸ್ತಾನ ಆರಂಭದಲ್ಲಿಯೇ ತತ್ತರಿಸಿತ್ತು. 

ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನ 15 ರನ್‌ ಗಳಿರುವಾಗಲೇ ಪ್ರಮುಖ ಆಟಗಾರ ಬಾಬರ್‌ ಆಝಂ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಫಕರ್‌ ಝಮಾನ್‌ ಮತ್ತು ಬಾಬರ್‌ ಕೇವಲ 10 ರನ್‌ ಗಳಿಗೆ ತಮ್ಮ ವಿಕೆಟ್‌ ಒಪ್ಪಿಸಿದರು. ಬಳಿಕ ಮುಹಮ್ಮದ್‌ ರಿಝ್ವಾನ್‌ ಉತ್ತಮ ಪ್ರದರ್ಶನದೊಂದಿಗೆ 43 ರನ್‌ ಗಳಿಸಿ ಪಾಕಿಸ್ತಾನ ತಂಡಕ್ಕೆ ನೆರವಾದರು. 

ಮುಹಮ್ಮದ್‌ ರಿಝ್ವಾನ್‌ ರ ಉತ್ತಮ ಪ್ರದರ್ಶನದೊಂದಿಗೆ ಪಾಕಿಸ್ತಾನ ತಂಡವು 19.5 ಓವರ್‌ ಗಳಲ್ಲಿ‌ 147 ರನ್‌ ಗಳಿಗೆ ಎಲ್ಲಾ ವಿಕೆಟ್‌ ಗಳನ್ನು ಕಳೆದುಕೊಳ್ಳುವ ಮೂಲಕ ಒಟ್ಟು 148 ರನ್‌ ಗಳ ಗುರಿಯನ್ನು ನೀಡಿತ್ತು. 

ಭಾರತದಿಂದ ಬ್ಯಾಟಿಂಗ್‌ ಗೆ ಇಳಿದ ಕೆಎಲ್‌ ರಾಹುಲ್‌ ಶೂನ್ಯಕ್ಕೆ ಔಟಾಗಿ ಭಾರತೀಯ ಅಭಿಮಾನಿಗಳಿಗೆ ಆಘಾತವನ್ನು ನೀಡಿದರು. ವಿರಾಟ್‌ ಕೊಹ್ಲಿಯ ಆಕರ್ಶಕ ಬ್ಯಾಟಿಂಗ್‌ ಭಾರತಕ್ಕೆ ನೆರವಾಯಿತು. 

ಬೌಲಿಂಗ್‌ ವಿಭಾಗದಲ್ಲಿ ಮಾರಕ ದಾಳಿ ಸಂಘಟಿಸಿದ ವೇಗಿಗಳಾದ ಭುವನೇಶ್ವರ್‌ ಕುಮಾರ್‌ ನಾಲ್ಕು ವಿಕೆಟ್, ಆವೇಶ್‌ ಖಾನ್‌ 1, ಅರ್ಶ್‌ದೀಪ್‌ ಸಿಂಗ್ 2 ವಿಕೆಟ್‌ ಪಡೆದರೆ, ಹಾರ್ದಿಕ್‌ ಪಾಂಡ್ಯ ಪ್ರಮುಖ ಮೂರು ವಿಕೆಟ್‌ ಗಳನ್ನು ಕಿತ್ತು ಮಿಂಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News