ಏಶ್ಯಾಕಪ್‌ ಟಿ-20: ಹಾಂಕಾಂಗ್‌ ವಿರುದ್ಧ ಜಯಗಳಿಸಿದ ಭಾರತ

Update: 2022-08-31 17:26 GMT
Photo: Twitter/BCCI

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಶ್ಯಾಕಪ್‌-ಟಿ20 ಪಂದ್ಯಾವಳಿಯ ನಾಲ್ಕನೇ ಪಂದ್ಯಾಟದಲ್ಲಿ ಹಾಂಕಾಂಗ್‌ ವಿರುದ್ಧ ಭಾರತ ತಂಡವು ಜಯ ಸಾಧಿಸಿದೆ. ಭಾರತ ನೀಡಿದ್ದ 193 ರನ್‌ ಗಳ ಬೆನ್ನು ಹತ್ತಿದ್ದ ಹಾಂಕಾಂಗ್‌ ತಂಡವು 5 ವಿಕೆಟ್‌ ನಷ್ಟಕ್ಕೆ 152 ರನ್‌ ಪೇರಿಸಿ ಸೋಲೊಪ್ಪಿಕೊಂಡಿದೆ.

 ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡವು  ಸೂರ್ಯಕುಮಾರ್‌ ಯಾದವ್‌ ಹಾಗೂ ವಿರಾಟ್‌ ಕೊಹ್ಲಿ ಅದ್ಭುತ ಅರ್ಧಶತಕದ ಮೂಲಕ ತಂಡವನ್ನು ಸವಾಲಿನ ಮೊತ್ತಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾದರು. ವಿರಾಟ್‌ ಕೊಹ್ಲಿ 59 ರನ್‌ ಗಳಿಸಿದರೆ, ಸೂರ್ಯಕುಮಾರ್‌ ಯಾದವ್‌ ಕೇವಲ 26 ಎಸೆತಗಳಲ್ಲಿ 6 ಸಿಕ್ಸರ್‌ ಗಳೊಂದಿಗೆ 68 ರನ್‌ ಗಳಿಸಿದರು. 

ಹಾಂಕಾಂಗ್‌ ಪರ ಬಾಬರ್‌ ಹಯಾತ್‌ 41 ರನ್‌ ಹಾಗೂ ಕಿಂಚಿತ್‌ ಶಾ 30 ರನ್‌ ಗಳಿಸಿದರು. ಆವೇಶ್‌ ಖಾನ್‌, ಭುವನೇಶ್ವರ್‌ ಕುಮಾರ್‌, ರವೀಂದ್ರ ಜಡೇಜಾ ಹಾಗೂ ಅರ್ಶದೀಪ್‌ ಸಿಂಗ್‌ ತಲಾ 1 ವಿಕೆಟ್‌ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News