ದೇಶದ್ರೋಹದ ಪೋಸ್ಟ್: ಸೌದಿ ಮಹಿಳೆಗೆ ೪೫ ವರ್ಷ ಜೈಲುಶಿಕ್ಷೆ

Update: 2022-09-01 17:54 GMT

ರಿಯಾದ್, ಸೆ.೧: ಸಾಮಾಜಿಕ ಜಾಲತಾಣದ ಚಟುವಟಿಕೆಯ ಮೂಲಕ ದೇಶಕ್ಕೆ ಹಾನಿ ಎಸಗಿದ ಆರೋಪದಲ್ಲಿ ಬುಧವಾರ ಸೌದಿ ಅರೆಬಿಯಾದ ನ್ಯಾಯಾಲಯ ಮಹಿಳೆಯೊಬ್ಬರಿಗೆ ೪೫ ವರ್ಷದ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

‌ಸೌದಿ ಅರೆಬಿಯಾದ ಅತೀ ದೊಡ್ಡ ಬುಡಕಟ್ಟು ಸಮುದಾಯಕ್ಕೆ ಸೇರಿದ ನೋರಾ  ಬಿಂತ್ ಸಯೀದ್ ಅಲ್-ಖಹ್ತಾನಿ ಜೈಲುಶಿಕ್ಷೆಗೆ ಗುರಿಯಾದವರು. ಈಕೆ  ಯಾವುದೇ ಸಂಘಟನೆಯೊಂದಿಗೆ ಗುರುತಿಸಿಕೊಂಡಿರಲಿಲ್ಲ ಅಥವಾ ಈ ಹಿಂದೆ ದೇಶವಿರೋಧಿ ಕೃತ್ಯ ಎಸಗಿದ ಇತಿಹಾಸ ಹೊಂದಿರಲಿಲ್ಲ. ನೋರಾ ಸಾಮಾಜಿಕ ಮಾಧ್ಯಮದ ಪೋಸ್ಟಿಂಗ್‌ಗಳ ಮೂಲಕ ಸಮಾಜದ ಒಗ್ಗಟ್ಟಿಗೆ ಅಡ್ಡಿ ಪಡಿಸುತ್ತಿದ್ದಾರೆ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸುತ್ತಿದ್ದಾರೆ. ಮಾಹಿತಿ ಜಾಲದ ಮೂಲಕ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಇವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್  ಸೌದಿ ಅರೆಬಿಯಾದ ಸಮಗ್ರತೆ ಮತ್ತು ಏಕತೆಗೆ ಧಕ್ಕೆ ತರುವಂತಿದೆ ಎಂದು ಶಿಕ್ಷೆ ಪ್ರಕಟಿಸಿದ ನ್ಯಾಯಾಧೀಶರು ಘೋಷಿಸಿದ್ದಾರೆ. ನೋರಾಳನ್ನು ೨೦೨೧ರ  ಜುಲೈ ೪ರಂದು ಕಸ್ಟಡಿಗೆ ಪಡೆಯಲಾಗಿತ್ತು.

`

ತನ್ನ ಅಭಿಪ್ರಾಯಗಳನ್ನು ಟ್ವೀಟ್ ಮಾಡಿದ್ದಕ್ಕೆ ನೌರಾಳನ್ನು ಜೈಲಿಗಟ್ಟಲಾಗಿದೆ. ಇದು ವಿಶೇಷ ಕ್ರಿಮಿನಲ್ ನ್ಯಾಯಾಲದಲ್ಲಿ ನೇಮಕಗೊಂಡಿರುವ ಹೊಸ ನ್ಯಾಯಾಧೀಶರಿಂದ ಹೊಸ ಅಲೆಯ ಆದೇಶ ಮತ್ತು ತೀರ್ಪಿನ ಆರಂಭ ಆಗಿರಬಹುದು' ಎಂದು ಅಮೆರಿಕ ಮೂಲದ `ಡೆಮಾಕ್ರಸಿ ಫಾರ್ ದಿ ಅರಬ್ ವರ್ಲ್ಡ್ ನೌ' ಎಂಬ ಮಾನವಹಕ್ಕು ನಿಗಾ ಸಮಿತಿಯ  ಸಂಶೋಧನಾ ನಿರ್ದೇಶಕ(ಸೌದಿ ಅರೆಬಿಯಾ ಮತ್ತು ಯುಎಇ ವಿಭಾಗ) ಅಬ್ದುಲ್ಲಾ ಅಲ್ಲಾವುದ್ ಟೀಕಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News