ಆಸ್ಟ್ರೇಲಿಯಾ: ಅಪಘಾತದಲ್ಲಿ ಪಂಜಾಬ್ ಗಾಯಕ ಮೃತ್ಯು

Update: 2022-09-01 18:01 GMT

ಸಿಡ್ನಿ, ಸೆ.೧: ಆಸ್ಟ್ರೇಲಿಯಾದಲ್ಲಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪಂಜಾಬ್‌ನ ಯುವಗಾಯಕ ನಿರ್ವೈರ್ ಸಿಂಗ್ ಮೃತಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಮೆಲ್ಬೋರ್ನ್ ಸಮೀಪದ ಡಿಗರ್ಸ್ ರೆಸ್ಟ್ ಪ್ರಾಂತದ ಬುಲ್ಲಾ-ಡಿಗರ್ಸ್ ರಸ್ತೆಯಲ್ಲಿ ಅವರು ಕೆಲಸದ ಸ್ಥಳಕ್ಕೆ ತೆರಳುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಕಾರೊಂದಕ್ಕೆ  ವೇಗವಾಗಿ ಧಾವಿಸಿ ಬಂದ ಕಾರು ನಿಯಂತ್ರಣ ಕಳೆದುಕೊಂಡು  ಡಿಕ್ಕಿಯಾಗಿದೆ, ಬಳಿಕ ಮತ್ತೆರಡು ವಾಹನಕ್ಕೂ ಅಪ್ಪಳಿಸಿದೆ. ಈ ಅಪಘಾತದಲ್ಲಿ ೪೨ ವರ್ಷದ  ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತ ಎಸಗಿದ ಕಾರಿನ ಚಾಲಕನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದ ಸಿಂಗ್, ಮೈ ಟರ್ನ್ ಎಂಬ ಮ್ಯೂಸಿಕ್ ಆಲ್ಬಂ ಹೊರತಂದಿದ್ದು ಅದರಲ್ಲಿನ `ತೇರೆ ಬಿನಾ' ಎಂಬ ಹಾಡಿನ ಮೂಲಕ ಜನಪ್ರಿಯರಾಗಿದ್ದರು.  ಯುವಗಾಯಕನ ಅಕಾಲಿಕ ದುರ್ಮರಣಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಸಂತಾಪ ಮತ್ತು ಶೃದ್ಧಾಂಜಲಿ ಸಲ್ಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News