ಕ್ಷಾಮದ ಅಂಚಿನಲ್ಲಿ ಸೊಮಾಲಿಯಾ

Update: 2022-09-05 17:16 GMT

ನೈರೋಬಿ, ಸೆ.೫: ಬರಗಾಲದಿಂದ ತತ್ತರಿಸಿರುವ ಸೊಮಾಲಿಯಾವು ಕ್ಷಾಮದ ಅಂಚಿನಲ್ಲಿದೆ ಮತ್ತು ಜನರ ಜೀವ ಉಳಿಸಲು ಹೆಚ್ಚಿನ ಸಮಯಾವಕಾಶದ ಕೊರತೆಯಿದೆ ಎಂದು ವಿಶ್ವಸಂಸ್ಥೆ ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಸೋಮವಾರ ಎಚ್ಚರಿಸಿದ್ದಾರೆ.

ಕ್ಷಾಮವು ಈಗ ಸೊಮಾಲಿಯಾದ ಬಾಗಿಲಲ್ಲಿ ನಿಂತಿದ್ದು ನಾವು ಅಂತಿಮ ಎಚ್ಚರಿಕೆಯ ಸಂದೇಶ ಪಡೆಯುತ್ತಿದ್ದೇವೆ. ಜೀವಗಳನ್ನು ಉಳಿಸಲು ನಮಗೆ ಕಿಂಚಿತ್ ಅವಕಾಶವಿದೆ ಎಂದು ಮೊಗದಿಶುವಿನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಗ್ರಿಫಿತ್ಸ್ ಹೇಳಿದ್ದಾರೆ.

ಸೊಮಾಲಿಯಾಕ್ಕೆ ಸಂಬAಧಿಸಿದ ಆಹಾರ ಮತ್ತು ಪೌಷ್ಟಿಕಾಂಶದ ವರದಿಯಲ್ಲಿ ಕ್ಷಾಮವು ಸೊಮಾಲಿಯಾದ ೨ ಪ್ರಾಂತಗಳಿಗೆ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಅಪ್ಪಳಿಸುವ  ಬಗ್ಗೆ ಸಶಕ್ತ ಪುರಾವೆಗಳಿವೆ. ಸೊಮಾಲಿಯಾದ ಜನತೆ ಅನುಭವಿಸುತ್ತಿರುವ ನೋವು ಮತ್ತು ಸಂಕಷ್ಟವನ್ನು ಕಣ್ಣಾರೆ ಕಂಡು ಆಘಾತಗೊಂಡಿದ್ದೇನೆ ಎಂದವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News