×
Ad

ಪಾಕಿಸ್ತಾನದ ನೆರೆಪೀಡಿತ ಪ್ರದೇಶಗಳಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್ ಭೇಟಿ

Update: 2022-09-10 22:37 IST

ಇಸ್ಲಮಾಬಾದ್, ಸೆ.10: ಪಾಕಿಸ್ತಾನದಲ್ಲಿ ವಿನಾಶಕಾರಿ ಪ್ರವಾಹದಿಂದ ತತ್ತರಿಸಿರುವ ಪ್ರದೇಶಗಳಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಶನಿವಾರ ಭೇಟಿ ನೀಡಿ, ನಾಶ-ನಷ್ಟದ ಪರಿಶೀಲನೆ ನಡೆಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ನೆರೆಯಿಂದ ಆಗಿರುವ ನಷ್ಟದ ಬಗ್ಗೆ ಪರಿಶೀಲನೆ ನಡೆಸಲು ಹಾಗೂ ಪಾಕಿಸ್ತಾನಕ್ಕೆ  ಅಂತರಾಷ್ಟ್ರೀಯ ನೆರವನ್ನು ಬೆಂಬಲಿಸುವ ಉದ್ದೇಶದಿಂದ ಗುಟೆರಸ್ ಶುಕ್ರವಾರ ಪಾಕಿಸ್ತಾನಕ್ಕೆ ಆಗಮಿಸಿದ್ದರು. ಶನಿವಾರ ಅವರು ಸಿಂಧ್ ಪ್ರಾಂತ್ಯ ಮತ್ತು  ಬಲೂಚಿಸ್ತಾನಕ್ಕೆ ಭೇಟಿ ನೀಡಿದರು.

`ಪಾಕಿಸ್ತಾನಕ್ಕೆ ಬೃಹತ್ ಆರ್ಥಿಕ ನೆರವಿನ ಅಗತ್ಯವಿದೆ. ಇದು ಉದಾರತೆಯ ವಿಷಯವಲ್ಲ, ನ್ಯಾಯದ ವಿಷಯವಾಗಿದೆ. ಕಡಿಮೆ ಆದಾಯದ ದೇಶಗಳ ಮೇಲೆ ಹವಾಮಾನ ಬದಲಾವಣೆ ಸಮಸ್ಯೆಯಿಂದ ಆಗುವ ಪರಿಣಾಮಗಳನ್ನು ವಿಶ್ವ ಗಮನಿಸಬೇಕು. ಮನುಕುಲ ಪ್ರಕೃತಿಯ ಮೇಲೆ ಯುದ್ಧವನ್ನು ನಡೆಸುತ್ತಿದೆ ಮತ್ತು ಪ್ರಕೃತಿ ಇದಕ್ಕೆ ಪ್ರತಿಕ್ರಿಯಿಸಿದೆ' ಎಂದು ಗುಟೆರಸ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News