ಇಸ್ರೇಲ್ ಸೇನೆಯ ದಾಳಿಯಲ್ಲಿ ಪೆಲೆಸ್ತೀನ್ ಪ್ರಜೆ ಮೃತ್ಯು

Update: 2022-09-11 18:13 GMT
PHOTO SOURE: EFP

ಜೆನಿನ್, ಸೆ.11: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಐದು ದಿನಗಳ ಹಿಂದೆ ಇಸ್ರೇಲ್ ಸೇನೆ ಮನೆಯೊಂದನ್ನು ನೆಲಸಮಗೊಳಿಸುವ ಸಂದರ್ಭ ನಡೆದ ಘರ್ಷಣೆಯಲ್ಲಿ ಗಾಯಗೊಂಡಿದ್ದ ಪೆಲೆಸ್ತೀನ್ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ಪೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ.

ಎಪ್ರಿಲ್ 7ರಂದು ಇಸ್ರೇಲ್‌ನ ಟೆಲ್ಅವೀವ್ನಲ್ಲಿ ಮೂವರು ಇಸ್ರೇಲ್ ಪ್ರಜೆಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ(ಬಳಿಕ ಇಸ್ರೇಲ್ ಸೇನೆಯಿಂದ ಹತನಾಗಿದ್ದ) ರಾದ್ ಹಜೆಮ್ ಎಂಬ ಪೆಲೆಸ್ತೀನ್ ನಾಗರಿಕನ ಮನೆಯನ್ನು ಕೆಡವಲು ಸೆಪ್ಟಂಬರ್ 6ರಂದು ಇಸ್ರೇಲ್ ಸೇನೆ ಜೆನಿನ್ಗೆ ಆಗಮಿಸಿತ್ತು. ಆಗ ನಡೆದ ಸಂಘರ್ಷದಲ್ಲಿ ಸ್ಥಳೀಯ ನಿವಾಸಿ ಹಮದ್ ಮುಸ್ತಫಾ ಹುಸೇನ್ ಅಬು ಜೆಲ್ದಾ ಎಂಬಾತ ಇಸ್ರೇಲ್ ಸೇನೆಯ ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ರವಿವಾರ ಮೃತಪಟ್ಟಿರುವುದಾಗಿ ಪೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.

ಶಂಕಿತ ದಾಳಿಕೋರರ ಮನೆಯನ್ನು ಧ್ವಂಸ ಮಾಡುವ ಇಸ್ರೇಲ್‌ನ ನೀತಿ ಸಾಮೂಹಿಕ ಶಿಕ್ಷೆಗೆ ಸಮವಾಗಿದೆ. ಯಾಕೆಂದರೆ ಇದರಿಂದ ಮಕ್ಕಳು ಸಹಿತ ಅಮಾಯಕರು ನಿರಾಶ್ರಿತರಾಗಬಹುದು ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News