ಲಂಡನ್‌ ನಲ್ಲಿ ಭಾರತದ ಕ್ರಿಕೆಟ್‌ ಆಟಗಾರ್ತಿಯ ನಗ-ನಗದು ಕಳವು

Update: 2022-09-26 17:49 GMT
ತಾನಿಯಾ ಭಾಟಿಯಾ (PTI)

ಹೊಸದಿಲ್ಲಿ: ಮ್ಯಾರಿಯಟ್ ಹೋಟೆಲ್ ಲಂಡನ್ (London) ಮೈದಾ ವೇಲ್‌ನಲ್ಲಿ ತಂಗಿದ್ದಾಗ ತನ್ನ ವಸ್ತುಗಳ ಕಳ್ಳತನವಾಗಿದೆ ಎಂದು ಭಾರತ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ತಾನಿಯಾ ಭಾಟಿಯಾ(Taniya Bhatia) ಅವರು ಸೋಮವಾರ ಹೇಳಿದ್ದಾರೆ.

"ಮೈದಾ ಹೋಟೆಲ್‌ನಲ್ಲಿ ತಂಗಿದ್ದ ಸಮಯದಲ್ಲಿ ಯಾರೋ ನನ್ನ ಕೋಣೆಗೆ ನುಗ್ಗಿ ನಗದು, ಕಾರ್ಡ್‌ಗಳು, ಆಭರಣಗಳು ಮತ್ತು ವಾಚ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿ ತುಂಬಾ ಅಭದ್ರತೆ ಇದೆ” ಎಂದು ಭಾಟಿಯಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ

ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ (ECB) ಟ್ಯಾಗ್ ಮಾಡಿದ ಅವರು, ಈ ವಿಷಯವನ್ನು ಆದಷ್ಟು ಬೇಗ ತನಿಖೆ ಮಾಡಬೇಕು ಮತ್ತು ಸಮಸ್ಯೆಯನ್ನು ಪರಿಹರಿಸಬೇಕು ಎಂದು ಬರೆದಿದ್ದಾರೆ. 'ಇಸಿಬಿಯ ನೆಚ್ಚಿನ ಹೋಟೆಲ್‌ನಲ್ಲಿ ಭದ್ರತೆಯ ಬಗ್ಗೆ ಇಂತಹ ನಿರ್ಲಕ್ಷ್ಯವು ಆಶ್ಚರ್ಯಕರವಾಗಿದೆ. ಅವರು ವಿಷಯದ ಗಮನಹರಿಸುತ್ತಾರೆ' ಎಂದು ಭಾವಿಸುತ್ತೇವೆ. ಆದರೆ, ಈ ಬಗ್ಗೆ ಇಸಿಬಿ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News