×
Ad

ಖೆರ್ಸನ್ ಪ್ರಾಂತದಲ್ಲಿ ಉಕ್ರೇನ್ ಗೆ ಮುನ್ನಡೆ: ರಶ್ಯನ್ ಪಡೆಗೆ ದಿಗ್ಬಂಧನ?

Update: 2022-10-03 23:42 IST
PHOTO: TWITTER
@24talker

ಕೀವ್, ಅ.3: ಕಳೆದ ಫೆಬ್ರವರಿಯಲ್ಲಿ ರಶ್ಯದ ಆಕ್ರಮಣ ಆರಂಭಗೊಂಡಂದಿನಿಂದ ಇದೇ ಮೊದಲ ಬಾರಿಗೆ ಉಕ್ರೇನ್ ಪಡೆ ದಕ್ಷಿಣದ ಖೆರ್ಸನ್ ಪ್ರಾಂತದಲ್ಲಿ ರಶ್ಯ ಸೇನೆಯ ವಿರುದ್ಧ ನಿರ್ಣಾಯಕ ಮೇಲುಗೈ ಸಾಧಿಸಿದೆ ಎಂದು ವರದಿಯಾಗಿದೆ.

ನಿಪ್ರೊ ನದಿಯ ಪಶ್ಚಿಮ ದಂಡೆಯಲ್ಲಿ ಉಕ್ರೇನ್‌ನ ಯುದ್ಧ ಟ್ಯಾಂಕ್ ಆಕ್ರಮಣಕಾರಿಯಾಗಿ ಮುಂದೊತ್ತಿ ಬರುತ್ತಿದ್ದು ಈ ಪ್ರದೇಶದ ಹಲವಾರು ಗ್ರಾಮಗಳನ್ನು ಮರು ವಶಪಡಿಸಿಕೊಂಡಿದೆ. ಇಲ್ಲಿರುವ ಸಾವಿರಾರು ರಶ್ಯನ್ ಯೋಧರಿಗೆ ಪೂರೈಕೆ ವ್ಯವಸ್ಥೆ ಸಂಪೂರ್ಣ ಕಡಿತಗೊಳ್ಳುವ ಅಪಾಯವಿದೆ ಎಂದು ರಶ್ಯ ಸೇನೆಯ ಮೂಲಗಳು ಪ್ರತಿಕ್ರಿಯಿಸಿವೆ. ಯುದ್ಧರಂಗದಿಂದ ಬಂದಿರುವ ಮಾಹಿತಿ ಉದ್ವಿಗ್ನವಾಗಿದೆ. ಹೌದು, ಅವರು ನಿಜವಾಗಿಯೂ ಮುನ್ನಡೆ ಸಾಧಿಸಿದ್ದಾರೆ . ನಿಪ್ರೊ ನದಿಯ ದಂಡೆಯ ಪ್ರದೇಶ ದುದ್‌ಚಾನಿ ಅವರ ನಿಯಂತ್ರಣಕ್ಕೆ ಬಂದಿದೆ ಎಂದು ರಶ್ಯವು ಖರ್ಸನ್ ಪ್ರಾಂತವನ್ನು ಆಕ್ರಮಿಸಿಕೊಂಡ ಬಳಿಕ ಅಲ್ಲಿ ನೇಮಿಸಿದ್ದ ಮುಖ್ಯಸ್ಥ ವ್ಲಾದಿಮಿರ್ ಸಾಲ್ದೊ ಹೇಳಿದ್ದಾರೆ

 ಪೂರ್ವದಲ್ಲಿ ಇತ್ತೀಚೆಗೆ ಉಕ್ರೇನ್ ಪಡೆ ಸಾಧಿಸಿದ್ದ ಯಶಸ್ಸನ್ನು ಪ್ರತಿಬಿಂಬಿಸಿದೆ. ಈ ಮಧ್ಯೆ ಲಿಮಾನ್ ನಗರವನ್ನೂ ಉಕ್ರೇನ್ ಸೇನೆ ಮರುವಶಪಡಿಸಿಕೊಂಡಿದೆ. ಇದು ರಶ್ಯಕ್ಕೆ ಆಗಿರುವ ಮತ್ತೊಂದು ಭಾರೀ ಹಿನ್ನಡೆಯಾಗಿದೆ. ಅತ್ಯಂತ ಆಯಕಟ್ಟಿನ ಪ್ರದೇಶದಲ್ಲಿರುವ ಲಿಮಾನ್ ನಗರವನ್ನು ವಶಕ್ಕೆ ಪಡೆದಿರುವುದು ಲುಹಾಂಸ್ಕ್ ಪ್ರಾಂತದಲ್ಲಿ ಕೈತಪ್ಪಿರುವ ಪ್ರದೇಶಗಳನ್ನು ಮರಳಿ ವಶಪಡಿಸಿಕೊಳ್ಳುವಲ್ಲಿ ನಿರ್ಣಾಯಕ ಅಂಶವಾಗಲಿದೆ ಎಂದು ಅಲ್ಲಿನ ಗವರ್ನರ್ ಸೆರ್ಹಿಯ್ ಗಯ್ದಿಯ್ ಹೇಳಿದ್ದಾರೆ.

ಲಿಮಾನ್‌ನಲ್ಲಿ ನಡೆದ ಯಶಸ್ವೀ ಕಾರ್ಯಾಚರಣೆಯ ಕಾರಣ ನಾವೀಗ ಎರಡನೇ ಉತ್ತರ-ದಕ್ಷಿಣ ಮಾರ್ಗದಲ್ಲಿ ಮುಂದೊತ್ತಿ ಬರುತ್ತಿದ್ದೇವೆ ಎಂದು ಉಕ್ರೇನ್‌ನ ಅಧಿಕಾರಿ ವಿಕ್ಟರ್ ಕೆವ್ಲ್ಯಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News