×
Ad

ಮಗನಿಗೆ ವಿಚ್ಛೇದನ ನೀಡಲು ಉದ್ದೇಶಿಸಿದ್ದ ಸೊಸೆಯನ್ನು ಕೊಂದ ಭಾರತೀಯ-ಅಮೆರಿಕನ್ ವ್ಯಕ್ತಿಯ ಬಂಧನ: ವರದಿ

Update: 2022-10-07 11:38 IST
Photo;twitter

ಸ್ಯಾನ್ ಫ್ರಾನ್ಸಿಸ್ಕೋ: ತನ್ನ ಮಗನಿಗೆ ವಿಚ್ಛೇದನ ನೀಡಲು ಉದ್ದೇಶಿಸಿರುವ ತನ್ನ ಸೊಸೆಯನ್ನು ಕೋಪದಿಂದ ಪಾರ್ಕಿಂಗ್ ಸ್ಥಳದಲ್ಲಿ ಮಾರಣಾಂತಿಕವಾಗಿ ಗುಂಡಿಕ್ಕಿ ಹತ್ಯೆಗೈದ 74 ವರ್ಷದ ಭಾರತೀಯ-ಅಮೆರಿಕನ್ ವ್ಯಕ್ತಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಸಿತಾಲ್ ಸಿಂಗ್ ದೋಸಾಂಜ್ ಎಂಬಾತ ತನ್ನ ಸೊಸೆ ಗುರುಪ್ರೀತ್ ಕೌರ್ ದೋಸಾಂಜ್ ರನ್ನು ಕಳೆದ ವಾರ ಆಕೆ ಕೆಲಸ ಮಾಡುತ್ತಿದ್ದ ವಾಲ್‌ಮಾರ್ಟ್‌ನ ದಕ್ಷಿಣ ಸ್ಯಾನ್ ಜೋಸ್ ಪಾರ್ಕಿಂಗ್ ಸ್ಥಳದಲ್ಲಿ ಕೊಂದಿದ್ದಾನೆ ಎಂದು ಈಸ್ಟ್ ಬೇ ಟೈಮ್ಸ್ ವರದಿ ಮಾಡಿದೆ.

ಸೀತಾಲ್  ಬಂಧನಕ್ಕೆ ಕಾರಣವಾದ ಪೊಲೀಸ್ ತನಿಖೆಯಲ್ಲಿ ಸಂತ್ರಸ್ತೆ ಶುಕ್ರವಾರ ಫೋನ್‌ನಲ್ಲಿ ಮಾವ ಸೀತಾಲ್ ತನ್ನನ್ನು ಹುಡುಕುತ್ತಿದ್ದಾನೆ ಎಂದು ತನ್ನ ಚಿಕ್ಕಪ್ಪನ ಬಳಿ  ಹೇಳಿದ್ದಳು ಎಂದು ತಿಳಿದುಬಂದಿದೆ.

ತನ್ನ ಸೊಸೆ  ಕೌರ್ ಸಿತಾಲ್ ಸಿಂಗ್  ಮಗನಿಗೆ ವಿಚ್ಛೇದನ ನೀಡುವ ಪ್ರಕ್ರಿಯೆಯಲ್ಲಿದ್ದಳು. ಅಪ್ಪ ಹಾಗೂ ಮಗ ಫ್ರೆಸ್ನೋದಲ್ಲಿ ವಾಸಿಸುತ್ತಿದ್ದರು. ಮೃತ ಗುರ್‌ಪ್ರೀತ್  ಅವರು ಸ್ಯಾನ್ ಜೋಸ್‌ನಲ್ಲಿ ವಾಸಿಸುತ್ತಿದ್ದರು ಎಂದು ಗುರುಪ್ರೀತ್ ಚಿಕ್ಕಪ್ಪ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News