ದುರ್ನಡತೆ ಆರೋಪ: ಬ್ರಿಟನ್ ಸಚಿವ ಬರ್ನ್ಸ್ ವಜಾ
Update: 2022-10-08 22:38 IST
ಲಂಡನ್, ಅ.8: ದುರ್ನಡತೆಯ ಆರೋಪದ ಹಿನ್ನೆಲೆಯಲ್ಲಿ ವ್ಯವಹಾರ ಇಲಾಖೆಯಲ್ಲಿ ಸಚಿವರಾಗಿರುವ ಕಾನರ್ ಬರ್ನ್ಸ್ ರನ್ನು ಬ್ರಿಟನ್ ಪ್ರಧಾನಿ ಲಿಸ್ ಟ್ರಸ್ ಶುಕ್ರವಾರ ವಜಾಗೊಳಿಸಿದ್ದಾರೆ ಎಂದು ಬ್ರಿಟನ್ ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ.
ಬರ್ನ್ಸ್ ವಿರುದ್ಧ ತೀವ್ರ ದುರ್ನಡತೆಯ ದೂರು ಕೇಳಿ ಬಂದೊಡನೆ ತಕ್ಷಣ ರಾಜೀನಾಮೆ ಸಲ್ಲಿಸುವಂತೆ ಪ್ರಧಾನಿ ಸೂಚಿಸಿದರು. ಅಲ್ಲದೆ ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ಉತ್ತಮ ಗುಣನಡತೆಯನ್ನು ಹೊಂದಿರಬೇಕು ಎಂದು ಎಲ್ಲಾ ಸಚಿವರಿಗೆ ಸಂದೇಶ ರವಾನಿಸಿದ್ದಾರೆ ಎಂದು ಪ್ರಧಾನಿ ಕಚೇರಿಯ ವಕ್ತಾರರು ಹೇಳಿದ್ದಾರೆ.