×
Ad

ಮೂರನೇ ಏಕದಿನ: ಭಾರತ ವಿರುದ್ಧ ದಕ್ಷಿಣ ಆಫ್ರಿಕಾ 99 ರನ್‌ಗೆ ಆಲೌಟ್

Update: 2022-10-11 17:25 IST
photo: twitter.com/BCCI

 ಹೊಸದಿಲ್ಲಿ, ಅ.11: ಸರಣಿ ನಿರ್ಣಾಯಕ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾವನ್ನು ಕೇವಲ 99 ರನ್‌ಗೆ ನಿಯಂತ್ರಿಸಿ ಗೆಲ್ಲಲು ಸುಲಭ ಸವಾಲು ಪಡೆದಿದೆ.

ಟಾಸ್ ಜಯಿಸಿದ ಭಾರತದ ನಾಯಕ ಶಿಖರ್ ಧವನ್ ದಕ್ಷಿಣ ಆಫ್ರಿಕಾವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು.

ಸ್ಪಿನ್ನರ್ ಕುಲದೀಪ್ ಯಾದವ್(4-18)ನೇತೃತ್ವದ ಬೌಲರ್‌ಗಳ ಶಿಸ್ತುಬದ್ದ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 27.1 ಓವರ್‌ಗಳಲ್ಲಿ 99 ರನ್‌ಗೆ ಆಲೌಟಾಯಿತು. ತಲಾ ಎರಡು ವಿಕೆಟ್‌ಗಳನ್ನು ಪಡೆದ ವಾಶಿಂಗ್ಟನ್ ಸುಂದರ್(2-15), ಮುಹಮ್ಮದ್ ಸಿರಾಜ್(2-17) ಹಾಗೂ ಶಹಬಾಝ್ ಅಹ್ಮದ್(2-32)ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಭಾರೀ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದ ದಕ್ಷಿಣ ಆಫ್ರಿಕಾದ ಪರ ಹೆನ್ರಿಕ್ ಕ್ಲಾಸೆನ್(34 ರನ್, 42 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಉಳಿದವರು ಪೆವಿಲಿಯನ್‌ಗೆ ಪರೇಡ್ ನಡೆಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News