‘ಐಎನ್‌ಎಸ್ ಅರಿಹಂತ’ದಿಂದ ಪರೀಕ್ಷಾರ್ಥ ಕ್ಷಿಪಣಿ ಪ್ರಯೋಗ

Update: 2022-10-14 17:47 GMT
photo : NDTV 

ಹೊಸದಿಲ್ಲಿ,ಅ.14: ಭಾರತವು ಶುಕ್ರವಾರ ಪರಮಾಣು ಸಮರ್ಥ ‘ಐಎನ್‌ಎಸ್ ಅರಿಹಂತ ’(INS Arihanta) ಜಲಾಂತರ್ಗಾಮಿಯಿಂದ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಪೂರ್ವ ನಿರ್ಧರಿತ ವ್ಯಾಪ್ತಿಯಲ್ಲಿ ಜಲಾಂತರ್ಗಾಮಿಯಿಂದ ಉಡಾಯಿಸುವ ಕ್ಷಿಪಣಿಯ ಪರೀಕ್ಷೆ ನಡೆಸಲಾಗಿದ್ದು,ಅದು ಬೆಂಗಾಲ ಕೊಲ್ಲಿಯಲ್ಲಿನ ನಿಗದಿತ ಗುರಿಪ್ರದೇಶವನ್ನು ಅತ್ಯಂತ ನಿಖರವಾಗಿ ತಲುಪಿದೆ ಎಂದು ರಕ್ಷಣಾ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಐಎನ್‌ಎಸ್ ಅರಿಹಂತ ನಿಯೋಜಿತ ಎಸ್2 ವ್ಯೆಹಾತ್ಮಕ ದಾಳಿ ಪರಮಾಣು ಸಮರ್ಥ ಜಲಾಂತರ್ಗಾಮಿಯಾಗಿದ್ದು,ಅದು ಭಾರತದ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿಗಳ ಅರಿಹಂತ ವರ್ಗದ ಅಗ್ರ ನೌಕೆಯಾಗಿದೆ.

6,000 ಟನ್ ತೂಕದ ಈ ಜಲಾಂತರ್ಗಾಮಿಯು ವಿಶಾಖಪಟ್ಟಣದಲ್ಲಿಯ ಹಡಗು ನಿರ್ಮಾಣ ಕೇಂದ್ರದಲ್ಲಿ ನಿರ್ಮಾಣಗೊಂಡಿದೆ. 2009,ಜು.26ರ ವಿಜಯ ದಿವಸ್‌ನಂದು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಅರಿಹಂತಕ್ಕೆ ಚಾಲನೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News