ಕೆಮ್ಮಿನ ಸಿರಪ್ ನ ಔಷಧಿ ಪದಾರ್ಥಗಳಿಗೆ ಇಂಡೊನೇಶಿಯ ನಿಷೇಧ

Update: 2022-10-15 17:26 GMT

ಜಕಾರ್ತ,ಆ.15: ಗಾಂಬಿಯಾದಲ್ಲಿ 70 ಮಕ್ಕಳ ಸಾವಿಗೆ ಕಾರಣವಾದ  ಕೆಮ್ಮಿನ ಸಿರಪ್(Cough syrup) ಗಳಲ್ಲಿ ಬಳಸಲಾದ ರಾಸಾಯನಿಕ ಪದಾರ್ಥಗಳನ್ನು ಇಂಡೋನೇಶಿಯಾ(Indonesia) ಶನಿವಾರ ನಿಷೇಧಿಸಿದೆ. ರಾಷ್ಟ್ರದ ರಾಜಧಾನಿ ಜಕಾರ್ತ(Jakarta)ದಲ್ಲಿ 20ಕ್ಕೂ ಅಧಿಕ ಮಕ್ಕಳು ತೀವ್ರವಾದ ಮೂತ್ರಜನಕಾಂಗದ ಕಾಯಿಲೆಯಿಂದ ಸಾವನ್ನಪ್ಪಿದ ಘಟನೆಯ ಬಗೆಗೂ ತನಿಖೆ ನಡೆಸಲು ಅದು ನಿರ್ಧರಿಸಿದೆ.

  ಕಫ್ ಸಿರಪ್ ಗಳಲ್ಲಿ ಬಳಸಲಾದ ಡಿಥಿಲಿನ್ ಗ್ಲೈಕೊಲ್ (Diethylene glycol)ಹಾಗೂ ಎಥಿಲಿನ್ ಗ್ಲೈಕೊಲ್ (Ethylene glycol)ಪದಾರ್ಥಗಳು, ಔಷಧಗಳಲ್ಲಿ ದ್ರಾವಕಗಳಾಗಿ ಬಳಸಲಾಗುವ ಇತರ ಪದಾರ್ಥಗಳನ್ನು ಕಲುಷಿತಗೊಳಿಸಿರುವ  ಸಾಧ್ಯತೆಯ ಬಗ್ಗೆ ತಾನು ತನಿಖೆ ನಡೆಸುತ್ತಿರುವುದಾಗಿ ಆಹಾರ ಹಾಗೂ ಔಷಧಿ ನಿಯಂತ್ರಣ ಸಂಸ್ಥೆ ಬಿಪಿಓಎಂ ವರದಿ ಮಾಡಿದೆ.

 ಪಶ್ಚಿಮ ಆಫ್ರಿಕದ ದೇಶವಾದ ಗಾಂಬಿಯಾದಲ್ಲಿ ಹೊಸದಿಲ್ಲಿ ಮೂಲದ ಮೈಡೆನ್ ಫಾರ್ಮಾಸ್ಯೂಟಿಕಲ್ಸ್ ಉತ್ಪಾದಿಸಿದ ಕೆಮ್ಮಿನ ಸಿರಪ್ ಗಳನು ಸೇವಿಸಿ ಮೂತ್ರಜನಕಾಂಗಕ್ಕೆ ತೀವ್ರವಾದ ಹಾನಿಯುಂಟಾಗಿ, 70 ಮಕ್ಕಳು ಸಾವನ್ನಪ್ಪಿದ ಘಟನೆಯ ಬಗ್ಗೆ ಭಾರತ ಹಾಗೂ ಗಾಂಬಿಯಾ ದೇಶಗಳೆರಡೂ ತನಿಖೆ ನಡೆಸುತ್ತಿವೆ.

  ಮೈಡನ್ ಕಂಪೆನಿ ಉತ್ಪಾದಿಸಿರುವ ನಾಲ್ಕು ಔಷಧಗಳಲ್ಲಿ ಅಸ್ವೀಕಾರಾರ್ಹ ಪ್ರಮಾಣದಲ್ಲಿ ರಾಸಾನಿಯಕ ಅಂಶಗಳಿದ್ದು ಅವು ಅಪಾಯಕಾರಿಯಾಗುವ ಸಾಧ್ಯತೆಯಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News