ಉಕ್ರೇನ್ ಯುದ್ಧದಲ್ಲಿ ನ್ಯಾಟೋ ಪಡೆಗಳು ಮಧ್ಯಪ್ರವೇಶಿಸಿದರೆ ಜಾಗತಿಕ ವಿನಾಶ : ಪುಟಿನ್ ಎಚ್ಚರಿಕೆ

Update: 2022-10-15 17:30 GMT

ಅಸ್ತಾನಾ,ಅ.16: ಉಕ್ರೇನ್(Ukraine) ಯುದ್ಧದಲ್ಲಿ ನ್ಯಾಟೊಪಡೆ(NATO force)ಗಳು ಮಧ್ಯಪ್ರವೇಶಿಸಿದರೆ ವಿಶ್ವಮಹಾಯುದ್ಧದ ಸಾಧ್ಯತೆಯಿರುವ ಬಗ್ಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ (Vladimir Putin)ಎಚ್ಚರಿಕೆ ನೀಡಿದ್ದಾರೆ.

  ನ್ಯಾಟೊ ಪಡೆಗಳ ಜೊತೆ ರಶ್ಯನ್ ಸೇನೆಗೆ ಯಾವುದೇ ರೀತಿಯ ಮುಖಾಮುಖಿ ಅಥವಾ ನೇರ ಸಂಘರ್ಷ ಉಂಟಾದಲ್ಲಿ ಅದು ಜಾಗತಿಕ ವಿನಾಶಕ್ಕೆ ಕಾರಣವಾಗಲಿದೆ ಎಂದು ರಶ್ಯದ ಅಧ್ಯಕ್ಷ ವ್ಲಾದಿಮರ್ ಪುತಿನ್ ತಿಳಿಸಿದ್ದಾರೆ. ಆದರೆ ಅಂತಹ ಪರಿಸ್ಥಿತಿಗೆ ಅವಕಾಶ ಮಾಡಿಕೊಡಬಾರದೆಂದು ಅವರು ಅಮೆರಿಕ ನೇತೃತ್ವದ ನ್ಯಾಟೊ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.

 ಕಳೆದ ತಿಂಗಳು ರಶ್ಯನ್ ಸೇನೆಯು ಉಕ್ರೇನ್ನ ನಾಲ್ಕು ಪ್ರಾಂತಗಳನ್ನು ವಶಪಡಿಸಿಕೊಂಡ ಬಳಿಕ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಹೇಳಿಕೆಯೊಂದನ್ನು ನೀಡಿ, ರಶ್ಯದ ಪ್ರಾಂತಗಳನ್ನು ರಕ್ಷಿಸಲು ತಾನು ಅಣ್ವಸ್ತ್ರವನ್ನು ಬಳಸಲು ಕೂಡಾ ಸಿದ್ಧವಿರುವುದಾಗಿ ಎಚ್ಚರಿಕೆ ನೀಡಿದ್ದರು. ಪುತಿನ್ ಅವರ ಈ ಹೇಳಿಕೆಯನ್ನು ವಿಶ್ವಸಂಸ್ಥೆಯು ಬಲವಾಗಿ ಖಂಡಿಸಿತ್ತು.

  ಉಕ್ರೇನ್ ಮೇಲೆ ಅಣ್ವಸ್ತ್ರಗಳ ಬಳಕೆಯು ಗಂಭೀರವಾದ ಪರಿಣಾಮಗಳಿಗೆ ಕಾರಣವಾಗಲಿದೆಯೆಂದು ಮಂಗಳವಾರ ಬ್ರಿಟನ್, ಜರ್ಮನಿ, ಇಟಲಿ, ಕೆನಡ, ಅಮೆರಿಕ , ಫ್ರಾನ್ಸ್ ಹಾಗೂ ಜಪಾನ್ ರಾಷ್ಟ್ರಗಳನ್ನೊಳಗೊಂಡ ಜಿ7 ಒಕ್ಕೂಟವು ಎಚ್ಚರಿಕೆಯನ್ನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News