ಪಾಕ್ ಜಗತ್ತಿನ ಅತ್ಯಂತ ಅಪಾಯಕಾರಿ ರಾಷ್ಟ್ರ : ಅಮೆರಿಕ ಅಧ್ಯಕ್ಷ ಜೋ ಬೈಡನ್

Update: 2022-10-15 17:35 GMT

  ವಾಶಿಂಗ್ಟನ್,ಆ.16: ಪಾಕಿಸ್ತಾನ(Pakistan)ವು ಜಗತ್ತಿನ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲೊಂದಾಗಿದ್ದು, ಅದು ಅಣ್ವಸ್ತ್ರವನ್ನು ಯಾವುದೇ ನಿರ್ಬಂಧಗಳಿಲ್ಲದೆ ತನ್ನ ವಶದಲ್ಲಿಟ್ಟುಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden)ಶುಕ್ರವಾರ ಬಣ್ಣಿಸಿದ್ದಾರೆ.

  ಕ್ಯಾಲಿಫೋರ್ನಿಯಾದ ಲಾಸ್ಏಂಜಲೀಸ್ನಲ್ಲಿ ಶುಕ್ರವಾರ ಡೆಮಾಕ್ರಾಟಿಕ್ ಪಕ್ಷದ ಸಂಸದೀಯ ಪ್ರಚಾರ ಸಮಿತಿಯು ಆಯೋಜಿಸಿದ್ದ ಸತ್ಕಾರಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

    ಚೀನಾ ಹಾಗೂ ರಶ್ಯ ಬಗ್ಗೆ ಅಮೆರಿಕದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಬಿಡೆನ್ ಅವರು ಪಾಕಿಸ್ತಾನವನ್ನು ಉಲ್ಲೇಖಿಸಿದ್ದರು. ಪಾಕಿಸ್ತಾನವು ಜಗತ್ತಿನ ಅತ್ಯಂತ ಅಪಾಯಕಾರಿ ರಾಷ್ಟ್ರವೆಂದು ತಾನು ಪರಿಗಣಿಸುವುದಾಗಿ ಹೇಳಿ ಅವರು ತನ್ನ ಭಾಷಣ ಮುಕ್ತಾಯಗೊಳಿಸಿದರು. ಭಾಷಣದಲ್ಲಿ ಅವರು ಚೀನಾ ಹಾಗೂ ರಶ್ಯ ವಿರುದ್ದವೂ ಕಿಡಿಕಾರಿದರು.

   ಚೀನಾದ ವಿಷಯವನ್ನು ಪ್ರಸ್ತಾವಿಸಿದ ಚೀನಾದ ಅಧ್ಯಕ್ಷ ಕ್ಸಿಜಿನ್ಪಿಂಗ್ (Xi Jinping)ಅಗಾಧವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಹಾಗೂ ಇದರ ಜೊತೆಗೆ ರಶ್ಯದಲ್ಲಿ ನಡೆಯುತ್ತಿರುವ ವಿದ್ಯಮಾನ ಇವೆಲ್ಲವೂ ಅಮೆರಿಕದ ಮೇಲೆ ಪರಿಣಾಮವನ್ನು ಬೀರಿದ್ದು ಅವೆಲ್ಲವನ್ನೂ ನಾವು ನಿಭಾಯಿಸಬೇಕಾಗಿದೆಯೆಂದು ಹೇಳಿದರು. ಅಲ್ಲದೆ ಪಾಕಿಸ್ತಾನಪು ಜಗತ್ತಿನ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲೊಂದಾಗಿದ್ದು, ಅದು ಯಾವುದೇ ನಿರ್ಬಂಧವಿಲ್ಲದೆ ಅಣ್ವಸ್ತ್ರಗಳನು ಇರಿಸಿಕೊಂಡಿದೆ’’ ಎಂದರು.

 ಬೈಡೆನ್ ಅವರ ಹೇಳಿಕೆಯು ಅಮೆರಿಕದ ಜೊತೆ ಬಾಂಧವ್ಯವನ್ನು ವೃದ್ಧಿಸಲು ಪ್ರಯತ್ನಿಸುತ್ತಿರುವ ಶಹಬಾಝ್ ಶರೀಫ್ ಸರಕಾರಕ್ಕೆ ಅತಿ ದೊಡ್ಡ ಹಿನ್ನಡೆಯೆಂದು ಪರಿಗಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News