1971ರಲ್ಲಿ ಬಾಂಗ್ಲಾದಲ್ಲಿ ಪಾಕ್ ಸೇನೆಯಿಂದ ಜನಾಂಗೀಯ ನರಮೇಧ

Update: 2022-10-15 17:41 GMT
Photo : NDTV 

      ವಾಶಿಂಗ್ಟನ್,ಅ.16: 1971ರಲ್ಲಿ ಈಗಿನ ಬಾಂಗ್ಲಾ(Bangla)ದಲ್ಲಿ ಪಾಕಿಸ್ತಾನ(Pakistan)ದ ಸಶಸ್ತ್ರ ಪಡೆಗಳು ನಡೆಸಿದ ಜನಾಂಗೀಯ ನರಮೇಧವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಅಮೆರಿಕ ಅಧ್ಯಕ್ಷ(President of America)ರನ್ನು ಆಗ್ರಹಿಸುವ ನಿರ್ಣಯವನ್ನು ಶುಕ್ರವಾರ ಅಮೆರಿಕದ ಇಬ್ಬರು ಪ್ರಭಾವಿ ಸಂಸದರು ಪ್ರತಿನಿಧಿ ಸಭೆಯಲ್ಲಿ ನಿರ್ಣಯವೊಂದನ್ನು ಮಂಡಿಸಿದ್ದಾರೆ.

ಭಾರತೀಯ ಮೂಲದ ಅಮೆರಿಕನ್ ಕಾಂಗ್ರೆಸ್ ಸಂಸದ ರೊ ಖನ್ನಾ (Ro Khanna)ಹಾಗೂ ಇನ್ನೋರ್ವ ಕಾಂಗ್ರೆಸ್ ಸಂಸದರಾದ ಸೆವ್ ಛಬೋಟ್(Sev Chabot) ಅವರು ಈ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು. ಇಂತಹ ಘೋರವಾದ ನರಮೇಧದಲ್ಲಿ ತನ್ನ ಪಾತ್ರವಿದ್ದುದಕ್ಕಾಗಿ ಪಾಕಿಸ್ತಾನ ಸರಕಾರವು ಬಾಂಗ್ಲಾದ ಜನತೆಯೊಂದಿಗೆ ಕ್ಷಮೆಯಾಚಿಸಬೇಕೆಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ.

 ‘‘ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಸಾಮೂಹಿಕವಾಗಿ ಹತ್ಯೆಯಾದ ಲಕ್ಷಾಂತರ ಮಂದಿಯ ನೆನಪನ್ನು ಅಳಿಸಿಹಾಕಲು ಕಾಲಕ್ಕೆ ಅವಕಾಶ ಕೊಡಬಾರದು. ಜನಾಂಗೀಯ ನರಮೇಧ ನಡೆದಿರುವುದನ್ನು ಪರಿಗಣನೆಗೆ ತೆಗೆದುಕೊಳ್ಳುವುದರಿಂದು ಐತಿಹಾಸಿಕ ದಾಖಲೆಯನ್ನು ಬಲಪಡಿಸಿದಂತಾಗುತ್ತದೆ. ಇದರ ಜೊತೆಗೆ ನಮ್ಮ ಅಮೆರಿಕನ್ ಬಾಂಧವರಲ್ಲಿ ಅರಿವು ಮೂಡಿಸಿದಂತಾಗುತ್ತದೆ . ಆದರೆ ಇಂತಹ ಅಪರಾಧಗಳನ್ನು ಸಹಿಸಿಕೊಳ್ಳಲು ಅಥವಾ ಮರೆಯಲು ಸಾಧ್ಯವಿಲ್ಲ’’ ಎಂದು ರಿಪಬ್ಲಿಕನ್ ಪಕ್ಷದ ಸದಸ್ಯ ಚಬೊಟ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News