ಉಕ್ರೇನ್ ನ 15,000 ಯೋಧರಿಗೆ ತರಬೇತಿ ನೀಡಲಿರುವ ಯುರೋಪಿಯನ್ ಯೂನಿಯನ್
Update: 2022-10-17 22:39 IST
ಬ್ರಸೆಲ್ಸ್, ಅ.17: ಮುಂದಿನ ತಿಂಗಳಿನಿಂದ ಉಕ್ರೇನ್ನ 15,000 ಪಡೆಗಳಿಗೆ ತರಬೇತಿ ನೀಡುವ ಉದ್ದೇಶವಿದೆ ಎಂದು ಯುರೋಪಿಯನ್ ಯೂನಿಯನ್(ಇಯು)ನ ಹೇಳಿಕೆ ತಿಳಿಸಿದೆ.
ಉಕ್ರೇನ್ಗೆ ಶಸ್ತ್ರಾಸ್ತ್ರ ಪೂರೈಸಲು ಹೆಚ್ಚುವರಿ ನಿಧಿಯನ್ನು ಮೀಸಲಿರಿಸಲೂ ಉದ್ದೇಶಿಸಲಾಗಿದೆ. ನವೆಂಬರ್ ಮಧ್ಯಭಾಗದಿಂದ ಪೋಲ್ಯಾಂಡ್ ಮತ್ತು ಜರ್ಮನಿಯ ನೆಲೆಯಲ್ಲಿ ತರಬೇತಿ ಆರಂಭವಾಗಲಿದೆ. ಉಕ್ರೇನ್ ಪಡೆಗಳಿಗೆ ಅಸಾಂಪ್ರದಾಯಿಕ ಅಸ್ತ್ರ ಬಳಕೆಯ ತರಬೇತಿಯೂ ಮುಂದುವರಿಯಲಿದೆ ಎಂದು ಯುರೋಪಿಯನ್ ಯೂನಿಯನ್ ಹೇಳಿದೆ. ಉಕ್ರೇನ್ ಯುದ್ಧ ಆರಂಭವಾದಂದಿನಿಂದಲೂ ಯುರೋಪಿಯನ್ ಯೂನಿಯನ್ ಉಕ್ರೇನ್ಗೆ ಆರ್ಥಿಕ ನೆರವಿನ ಜತೆಗೆ ಮಿಲಿಟರಿ ನೆರವನ್ನೂ ಒದಗಿಸುತ್ತಿದೆ.