ಉಪಚುನಾವಣೆ: ಇಮ್ರಾನ್ ಖಾನ್ ಪಕ್ಷದ ಭರ್ಜರಿ ಸಾಧನೆ
Update: 2022-10-17 22:42 IST
ಇಸ್ಲಮಾಬಾದ್, ಅ.17: ಪಾಕಿಸ್ತಾನದಲ್ಲಿ ನಡೆದ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್(Tehreek-e-Insaf)(ಪಿಟಿಐ) ಪಕ್ಷವು ಸಂಸತ್ನ 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 6 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
ಸಂಸತ್ ನ 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 7 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಇಮ್ರಾನ್ ಖಾನ್ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಅವರು ಒಂದು ಕ್ಷೇತ್ರವನ್ನು ಮಾತ್ರ ಪ್ರತಿನಿಧಿಸಲು ಸಾಧ್ಯವಿರುವುದರಿಂದ ಉಳಿದ ಕ್ಷೇತ್ರಗಳಿಗೆ ಮತ್ತೆ ಉಪಚುನಾವಣೆ ನಡೆಯಬೇಕಿದೆ. ಪಂಜಾಬ್ ಪ್ರಾಂತದ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಪಿಟಿಐನ ಮಿತ್ರಪಕ್ಷ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಘೋಷಿಸಿದೆ.