ಇರಾನ್ ಜತೆಗಿನ ಮಾತುಕತೆಯಲ್ಲಿ ಪ್ರಗತಿಯ ನಿರೀಕ್ಷೆಯಿಲ್ಲ: ಯುರೋಪಿಯನ್ ಯೂನಿಯನ್
Update: 2022-10-17 22:59 IST
ಬ್ರಸೆಲ್ಸ್, ಅ.17: 2015ರ ಪರಮಾಣು ಒಪ್ಪಂದದ ಮರುಸ್ಥಾಪನೆಯ ನಿಟ್ಟಿನಲ್ಲಿ ಇರಾನ್ನೊಂದಿಗೆ ನಡೆಯುತ್ತಿರುವ ಮಾತುಕತೆಯಲ್ಲಿ ಈಗಿನ ಮಟ್ಟಿಗೆ ಹೇಳುವುದಾದರೆ ಯಾವುದೇ ಪ್ರಗತಿಯನ್ನು ನಿರೀಕ್ಷಿಸಿಲ್ಲ ಎಂದು ಯುರೋಪಿಯನ್ ಯೂನಿಯನ್( ಇಯು) ವಿದೇಶಾಂಗ ನೀತಿ ವಿಭಾಗದ ಮುಖ್ಯಸ್ಥ ಜೋಸೆಫ್ ಬೊರೆಲ್(Joseph Borrell) ಸೋಮವಾರ ಹೇಳಿದ್ದಾರೆ.
ಲಕ್ಸೆಂಬರ್ಗ್ನ(of Luxembourg)ಲ್ಲಿ ನಡೆಯುತ್ತಿರುವ ಯುರೋಪಿಯನ್ ಯೂನಿಯನ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭ ಮಾಧ್ಯಮದವರ ಜತೆ ಮಾತನಾಡಿದ ಅವರು, ಇರಾನ್ನೊಂದಿಗೆ ಅಂತರಾಷ್ಪ್ರಿಯ ಸಮುದಾಯ ನಡೆಸುತ್ತಿದ್ದ ಮಾತುಕತೆ ಕಳೆದ ವಾರ ಸ್ಥಗಿತಗೊಂಡಿರುವುದನ್ನು ಉಲ್ಲೇಖಿಸಿದರು. ಇದೀಗ ಮಾತುಕತೆಯಲ್ಲಿ ಯಾವುದೇ ಪ್ರಗತಿಯನ್ನು ನಿರೀಕ್ಷಿಸಿಲ್ಲ. ಮಾತುಕತೆಯ ಯಶಸ್ಸಿಗೆ ನಾವು ಅತ್ಯಂತ ನಿಕಟವಾಗಿದ್ದರಿಂದ ಇದು ಅತ್ಯಂತ ಬೇಸರದ ವಿಷಯವಾಗಿದೆ ಎಂದು ಬೊರೆಲ್ ಹೇಳಿದ್ದಾರೆ.