×
Ad

ಬ್ರಿಟನ್ ಹಣದುಬ್ಬರ ಗರಿಷ್ಟ ಮಟ್ಟಕ್ಕೆ

Update: 2022-10-19 22:16 IST

ಲಂಡನ್, ಅ.19: ಸೆಪ್ಟಂಬರ್(September) ನಲ್ಲಿ ಬ್ರಿಟನ್ ನ ಹಣದುಬ್ಬರ ಪ್ರಮಾಣ 10.1%ಕ್ಕೆ ತಲುಪಿದ್ದು ಇದು ಕಳೆದ 40 ವರ್ಷಗಳಲ್ಲೇ ದಾಖಲೆಯಾಗಿದೆ ಎಂದು ಬ್ರಿಟನ್ನ ನ ರಾಷ್ಪ್ರಿಯ ಅಂಕಿಅಂಶ ಇಲಾಖೆಯ ಹೇಳಿಕೆ ತಿಳಿಸಿದೆ.

ಆಗಸ್ಟ್ ನ ಲ್ಲಿ ಹಣದುಬ್ಬರ ದರ 9.9%ದಷ್ಟಿತ್ತು. ಜೀವನ ವೆಚ್ಚದ ಬಿಕ್ಕಟ್ಟಿನಿಂದ ತತ್ತರಿಸಿರುವ ಜನತೆ ಮೂಲಭೂತ ಬಳಕೆಯನ್ನು ಕಡಿತಗೊಳಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಇಂಧನ ದರ (Fuel price)ಆಕಾಶದೆತ್ತರಕ್ಕೆ ತಲುಪಿರುವ ಕಾರಣ ಹಣದುಬ್ಬರ ಕಳೆದ ಜುಲೈಯಲ್ಲಿದ್ದ ಮಟ್ಟಕ್ಕೇ ತಲುಪಿದ್ದು ಇದು ಕಳೆದ 40 ವರ್ಷಗಳಲ್ಲೇ ದಾಖಲೆಯಾಗಿದೆ. ದೈನಂದಿನ ಬಳಕೆಯ ವಸ್ತುಗಳ ಬೆಲೆ ಹೆಚ್ಚಳ ಮತ್ತು ಇಂಧನ ದರ ಹೆಚ್ಚಳದಿಂದಾಗಿ ದೇಶದಾದ್ಯಂತ ಕುಟುಂಬಗಳಿಗೆ ಸಮಸ್ಯೆಯಾಗಿರುವುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಅತ್ಯಂತ ದುರ್ಬಲ ವರ್ಗದವರಿಗೆ ನೆರವಿಗೆ ಆದ್ಯತೆ ನೀಡುತ್ತದೆ ಮತ್ತು ಎಲ್ಲರಿಗೂ ಸಹಾಯವಾಗುವ ರೀತಿಯಲ್ಲಿ ವ್ಯಾಪಕ ಆರ್ಥಿಕ ಸ್ಥಿರತೆ ಮತ್ತು ದೀರ್ಘಾವಧಿಯ ಅಭಿವೃದ್ಧಿಗೆ ಯೋಜನೆ ರೂಪಿಸಿದೆ   ಎಂದು ಬ್ರಿಟನ್ನ ನೂತನ ವಿತ್ತಸಚಿವ ಜೆರೆಮಿ ಹಂಟ್ ಹೇಳಿದ್ದಾರೆ.

ನೂತನ ಪ್ರಧಾನಿ ಲಿಝ್ ಟ್ರಸ್ ಘೋಷಿಸಿದ ತೆರಿಗೆ ಕಡಿತ ಯೋಜನೆ ಬ್ರಿಟನ್ ಮಾರುಕಟ್ಟೆಯಲ್ಲಿ ಅವ್ಯವಸ್ಥೆಗೆ ಕಾರಣವಾದ ಬಳಿಕ ಈ ನಿರ್ಧಾರವನ್ನು ಸರಕಾರ ಹಿಂಪಡೆದಿದೆ. ಇದೀಗ ಹಣದುಬ್ಬರ ಪ್ರಮಾಣ ಏರಿಕೆಯಾಗಿರುವುದರಿಂದ ಬ್ಯಾಂಕ್ ಆಫ್ ಇಂಗ್ಲೆಂಡ್ ಪ್ರಮುಖ ಬಡ್ಡಿದರದಲ್ಲಿ ಹೆಚ್ಚಳ ಮಾಡುವ ನಿರೀಕ್ಷೆಯಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News