×
Ad

ಬಂಡಾಯ ಸಂಸದರ ವಿರುದ್ಧ ಶಿಸ್ತುಕ್ರಮ: ಬ್ರಿಟನ್ ಸರಕಾರದ ಎಚ್ಚರಿಕೆ

Update: 2022-10-20 22:23 IST

ಲಂಡನ್, ಅ.13: ಸರಕಾರದ ವಿರುದ್ಧ ಬಂಡೆದ್ದಿರುವ ಕನ್ಸರ್ವೇಟಿವ್ ಪಕ್ಷ(Conservative Party)ದ ಸಂಸದರ  ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಬ್ರಿಟನ್ ಸರಕಾರ(British Govt)ದ ವಕ್ತಾರರು  ಗುರುವಾರ ಎಚ್ಚರಿಕೆ ನೀಡಿದ್ದಾರೆ.

ಸರಕಾರವನ್ನು ಬೆಂಬಲಿಸಲು ವಿಫಲವಾದ ಸಂಸದರೊಂದಿಗೆ ಮುಖ್ಯ ಸಚೇತಕರು ಮಾತನಾಡಲಿದ್ದು , ಸಕಾರಣವಿಲ್ಲದೆ ಮತ ಚಲಾಯಿಸಲು ವಿಫಲವಾಗಿರುವುದು ಕಂಡುಬಂದರೆ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರದ ವಕ್ತಾರರು ಹೇಳಿದ್ದಾರೆ.

ಅಸಾಂಪ್ರದಾಯಿಕ ರೀತಿಯಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಅಭಿವೃದ್ಧಿ ಪ್ರಕ್ರಿಯೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ವಿಪಕ್ಷಗಳು ಮಂಡಿಸಿದ್ದ ನಿರ್ಣಯದಲ್ಲಿ ಸರಕಾರದ ಪರ ಮತ ಚಲಾಯಿಸದ ಪಕ್ಷದ ಸಂಸದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸರಕಾರ ಹೇಳಿದೆ.  ಈ ಮಧ್ಯೆ, 326-230 ಮತಗಳಿಂದ  ನಿರ್ಣಯಕ್ಕೆ ಸೋಲಾಗಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ವಿಪಕ್ಷಗಳು ಮಂಡಿಸಿದ್ದ ನಿರ್ಣಯವನ್ನು  ಪ್ರಧಾನಿ ಲಿಝ್ ಟ್ರಸ್ ಸರಕಾರದ ವಿರುದ್ಧದ ಅವಿಶ್ವಾಸ ನಿರ್ಣಯವೆಂದು ಪರಿಗಣಿಸಬೇಕೇ ಎಂಬ ವಿಷಯದಲ್ಲಿ ಬುಧವಾರ ಬ್ರಿಟನ್ ಸಂಸತ್ತಿನಲ್ಲಿ ಕಾವೇರಿದ ಚರ್ಚೆ ನಡೆದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News