ಇರಾನ್ ನ ಡ್ರೋನ್ ಗೆ ಯುರೋಪಿಯನ್‌ ಯೂನಿಯನ್ ನಿರ್ಬಂಧ

Update: 2022-10-20 17:00 GMT

ಬ್ರಸೆಲ್ಸ್, ಅ.20: ಉಕ್ರೇನ್ (Ukraine)ಮೇಲೆ ದಾಳಿ ನಡೆಸಲು ರಶ್ಯಕ್ಕೆ ಮಾರಣಾಂತಿಕ `ಕಮಿಕೇಝ್' ಡ್ರೋನ್ಗ(``Kamikaze'' Dron)ಳನ್ನು ಪೂರೈಸಿದ್ದಕ್ಕಾಗಿ ಇರಾನ್ ವಿರುದ್ಧ ನಿರ್ಬಂಧ ಜಾರಿಗೊಳಿಸುವುದಾಗಿ ಯುರೋಪಿಯನ್ ಯೂನಿಯನ್ (ಇಯು) ಹೇಳಿದೆ.

ಇರಾನ್ನ ಡ್ರೋನ್ ಉತ್ಪಾದಕ ಸಂಸ್ಥೆ `ಶಾಹೆದ್ ಏವಿಯೇಷನ್ ಇಂಡಸ್ಟ್ರೀಸ್',(``Shahed Aviation Industries'',) ಹಾಗೂ ಇರಾನ್ನ ಇಬ್ಬರು ಹಿರಿಯ ಮಿಲಿಟರಿ ಕಮಾಂಡರ್ಗಳು, ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್ನ ಅಧಿಕಾರಿ  ಬ್ರಿಗೇಡಿಯರ್ ಜನರಲ್ ಸಯೀದ್ ಅಘಾಜಾನಿರನ್ನು  ಕಪ್ಪುಪಟ್ಟಿಗೆ ಸೇರಿಸಲು ಯುರೋಪಿಯನ್ ಯೂನಿಯನ್ನ ನಿರ್ಬಂಧ ಸಮಿತಿ ಒಪ್ಪಿಗೆ ಸೂಚಿಸಿದೆ. ಇದನ್ನು ಯುರೋಪಿಯನ್ ಯೂನಿಯನ್ ಸರಕಾರ ಅನುಮೋದಿಸುವ ವಿಶ್ವಾಸವಿದೆ ಎಂದು ಫ್ರಾನ್ಸ್ ಅಧ್ಯಕ್ಷರ ವಕ್ತಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News