ಬ್ರಿಟನ್: ಪ್ರಧಾನಿ ಹುದ್ದೆಗೆ ನೂತನ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಗೆ ಚಾಲನೆ

Update: 2022-10-21 17:02 GMT

ಲಂಡನ್, ಅ.21: ತಕ್ಷಣ ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂಬ ಆಗ್ರಹ ಹೆಚ್ಚುತ್ತಿರುವಂತೆಯೇ ಪ್ರಧಾನಿ ಹುದ್ದೆಗೆ ನೂತನ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಗೆ ಬ್ರಿಟನ್ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಚಾಲನೆ (The Brick Conservative Party is running)ನೀಡಿದೆ ಎಂದು ವರದಿಯಾಗಿದೆ.

ಬೋರಿಸ್ ಜಾನ್ಸನ್ (Boris Johnson)ಪ್ರಧಾನಿ ಹುದ್ದೆಯಿಂದ ನಿರ್ಗಮಿಸಿದ 2 ತಿಂಗಳೊಳಗೆ ಕನ್ಸರ್ವೇಟಿವ್ ಪಕ್ಷ ಎರಡನೇ ಬಾರಿಗೆ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅನಿವಾರ್ಯತೆಗೆ ಸಿಲುಕಿದೆ. ರಿಷಿ ಸುನಾಕ್ (Rishi Sunak)ಅವರೆದುರಿನ ಸ್ಪರ್ಧೆಯಲ್ಲಿ ಗೆಲುವಿನ ನಗೆ ಬೀರಿದ್ದ  ಲಿಝ್ ಟ್ರಸ್(Liz Truss) ತನ್ನ ವಿಫಲ ಆರ್ಥಿಕ ನೀತಿಯಿಂದಾಗಿ ತೀವ್ರ ಒತ್ತಡಕ್ಕೆ ಸಿಲುಕಿ 45 ದಿನದಲ್ಲೇ ಅಧಿಕಾರದಿಂದ ನಿರ್ಗಮಿಸಿರುವುದು ಕನ್ಸರ್ವೇಟಿವ್ ಪಕ್ಷವನ್ನು ಮುಜುಗುರಕ್ಕೆ ಸಿಲುಕಿಸಿದೆ. ಸುನಾಕ್ ಎದುರಿಗಿನ ಪೈಪೋಟಿಯಲ್ಲಿ  ಟ್ರಸ್ ಮೇಲುಗೈ ಸಾಧಿಸಿದ ಸಂದರ್ಭ ಪ್ರಕಟವಾಗಿದ್ದ `ಯೂಗವ್' ಸಮೀಕ್ಷೆಯ ಪ್ರಕಾರ ಟ್ರಸ್ ಉತ್ತಮ  ಪ್ರಧಾನಿಯಾಗಿರುತ್ತಾರೆ ಎಂದು 12% ಜನತೆ ಅಭಿಪ್ರಾಯಪಟ್ಟಿದ್ದರೆ, 52% ಮಂದಿ ಅವರು ಈ ಹುದ್ದೆಗೆ ಸೂಕ್ತವಲ್ಲ ಅಥವಾ ಕಳಪೆ ಎಂದು ಉತ್ತರಿಸಿದ್ದರು.

ಬುಧವಾರ (ಟ್ರಸ್ ರಾಜೀನಾಮೆ ಘೋಷಣೆಗೆ ಹಿಂದಿನ ದಿನ) ಇದೇ ಸಂಸ್ಥೆ ಪ್ರಕಟಿಸಿದ್ದ ಸಮೀಕ್ಷೆಯಲ್ಲಿ ಟ್ರಸ್ ಅವರ ಜನಪ್ರಿಯತೆ -70(ಮೈನಸ್ 70)ಕ್ಕೆ ಇಳಿದಿತ್ತು ಮತ್ತು ಬ್ರಿಟನ್ನ ಅತ್ಯಂತ ಜನಪ್ರಿಯವಲ್ಲದ ಪ್ರಧಾನಿ ಎಂದು ಜನತೆ ಅಭಿಪ್ರಾಯಪಟ್ಟಿದ್ದರು. ಜಾನ್ಸನ್ (Johnson)ರಾಜೀನಾಮೆಯ ಬಳಿಕ ಟ್ರಸ್ರನ್ನು ಆ ಸ್ಥಾನಕ್ಕೆ ಕನ್ಸರ್ವೇಟಿವ್ ಪಕ್ಷದವರು ಆಯ್ಕೆ ಮಾಡಿದ್ದು, ಜನತೆ ಆಯ್ಕೆ ಮಾಡಿಲ್ಲ. ಈಗ ಮತ್ತೆ ಅದೇ ತಪ್ಪನ್ನು  ಪುನರಾವರ್ತಿಸಲು ಕನ್ಸರ್ವೇಟಿವ್ ಮುಖಂಡರು ಹೊರಟಿದ್ದಾರೆ. ಅದೇನೇ ಇದ್ದರೂ, ಇದೇ ಮೊದಲ ಬಾರಿಗೆ 4 ತಿಂಗಳಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯಡಿ ಆಯ್ಕೆಯಾಗದ 3 ಪ್ರಧಾನಿಗಳು ಹಾಗೂ 5 ವಿತ್ತಸಚಿವರನ್ನು ಬ್ರಿಟನ್ ಜನತೆ ಕಾಣುವಂತಾಗಿದೆ ಎಂದು ಪ್ರಜಾಪ್ರಭುತ್ವದ ಪರ ಧ್ವನಿ ಎತ್ತುವ `ಗವ್2. ಯುಕೆ' ಸಂಸ್ಥೆಯ ಸಂಸ್ಥಾಪಕ ಲಾಯ್ಡ್ ಹಾರ್ಡಿ ಹೇಳಿದ್ದಾರೆ.

ಬ್ರಿಟನ್ನಲ್ಲಿ ತಕ್ಷಣ ಚುನಾವಣೆ ನಡೆಯಬೇಕು ಎಂದು ವಿಪಕ್ಷಗಳೂ ಆಗ್ರಹಿಸುತ್ತಿವೆ. ಈ ಮಧ್ಯೆ, ದೇಶದಲ್ಲಿ ತಕ್ಷಣ ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂಬ ಆನ್ಲೈನ್ ಅಭಿಯಾನ ಆರಂಭವಾಗಿದ್ದು ಗುರುವಾರ ಸಂಜೆಯ ವೇಳೆಗೆ ಇದಕ್ಕೆ  6,57,586 ಮಂದಿ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News